ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ BoyCott ನಾಯಕವಾಡಿ ಮತ್ತೆ ಮೈದಾನದತ್ತ ದೌಡಾಯಿಸಿದ್ದ ಪಾಕಿಸ್ತಾನಕ್ಕೆ ಜಾಗತಿಕ ಮಟ್ಟದ ಅಪಮಾನ ಎದುರಾಗಿದೆ.
22 ಸದಸ್ಯರ ಪಾಕಿಸ್ತಾನ ಫುಟ್ಬಾಲ್ ತಂಡವನ್ನು ಜಪಾನ್ ನಿಂದ ಕಿಕ್ ಔಟ್ ಮಾಡಲಾಗಿದೆ.
ಮೂಲಗಳ ಪ್ರಕಾರ ಪಾಕಿಸ್ತಾನ ಫುಟ್ಬಾಲ್ ತಂಡವೆಂದು ಜಪಾನ್ ಗೆ ಹೋಗಿದ್ದ ಈ ತಂಡ ಅಸಲೀ ತಂಡ ಅಲ್ಲವೇ ಅಲ್ಲ ಎಂದು ಹೇಳಲಾಗಿದ್ದು, ಇದನ್ನು ಮನಗಂಡ ಜಪಾನ್ ಅಧಿಕಾರಿಗಳು ಎಲ್ಲ 22 ಮಂದಿಯನ್ನು ಜಪಾನ್ ನಿಂದ ಗಡಿಪಾರು ಮಾಡಿದ್ದಾರೆ ಎನ್ನಲಾಗಿದೆ.
ಜಪಾನಿಗೆ ಹೋದ ನಕಲಿ ಪಾಕಿಸ್ತಾನ ಫುಟ್ಬಾಲ್ ತಂಡವನ್ನು ವಂಚನೆ ಬಹಿರಂಗಗೊಂಡ ಬಳಿಕ ಗಡೀಪಾರು ಮಾಡಲಾಗಿದೆ ಎಂದು ಪಾಕಿಸ್ತಾನದ ಫೆಡರಲ್ ತನಿಖಾ ಸಂಸ್ಥೆ (FIA) ತಿಳಿಸಿದೆ.
ಮಾತ್ರವಲ್ಲದೇ 22 ಸದಸ್ಯರ ನಕಲಿ ಫುಟ್ಬಾಲ್ ತಂಡವನ್ನು ಜಪಾನ್‌ಗೆ ಕಳುಹಿಸುವಲ್ಲಿ ಮಾನವ ಕಳ್ಳಸಾಗಣೆ ಜಾಲ ಭಾಗಿಯಾಗಿದೆ ಎಂದು ಎಫ್ಐಎ ಹೇಳಿಕೆಯಲ್ಲಿ ತಿಳಿಸಿದೆ.
ನಕಲಿ ಆಟಗಾರರು ಫುಟ್ಬಾಲ್ ಆಟಗಾರರಂತೆ ಸಮವಸ್ತ್ರವನ್ನು ಧರಿಸಿದ್ದರು ಮತ್ತು ಪಾಕಿಸ್ತಾನ ಫುಟ್ಬಾಲ್ ಫೆಡರೇಶನ್‌ನಲ್ಲಿ ನೋಂದಾಯಿಸಿಕೊಂಡಿರುವುದಾಗಿ ಹೇಳಿಕೊಂಡಿದ್ದರು. ಅವರು ಜಪಾನಿನ ಕ್ಲಬ್‌ನೊಂದಿಗೆ ಪಂದ್ಯಗಳನ್ನು ನಿಗದಿಪಡಿಸಿರುವುದಾಗಿಯೂ ಹೇಳಿಕೊಂಡಿದ್ದರು.
15 ದಿನಗಳ ವೀಸಾ ಪಡೆಯುವಲ್ಲಿ ಯಶಸ್ವಿಯಾದ 22 ಸದಸ್ಯರ ನಕಲಿ ಫುಟ್ಬಾಲ್ ತಂಡವು ಜೂನ್ 2025ರಲ್ಲಿ ಜಪಾನ್ ತಲುಪಿತು. ಆದರೆ, ಜಪಾನಿನ ಅಧಿಕಾರಿಗಳು ವಿಮಾನ ನಿಲ್ದಾಣದಿಂದ ತಂಡವನ್ನು ಗಡೀಪಾರು ಮಾಡಿದ್ದಾರೆ ಮತ್ತು ನಂತರ ಈ ಬಗ್ಗೆ ಎಫ್ಐಎಗೆ ಮಾಹಿತಿ ನೀಡಿದ್ದಾರೆ.