April 6, 2026
Monday, April 6, 2026
spot_img

ಪಲ್ಯ, ಗ್ರೇವಿ & More 11 | ಢಾಬಾ ಸ್ಟೈಲ್ ಪಾಲಕ್ ಪನೀರ್ ರೆಸಿಪಿ ಇಲ್ಲಿದೆ! ಒಮ್ಮೆ ಟ್ರೈ ಮಾಡಿ

ಢಾಬಾ ಸ್ಟೈಲ್ ಪಾಲಕ್ ಪನೀರ್ ಅಂದ್ರೆ ಗಟ್ಟಿಯಾದ ಗ್ರೇವಿ ಮತ್ತು ಸಾಫ್ಟ್ ಪನೀರ್ ತುಂಡುಗಳ ಕಾಂಬಿನೇಶನ್. ಉತ್ತರ ಭಾರತದ ಢಾಬಾಗಳಲ್ಲಿ ಸಿಗುವ ರುಚಿ ಈಗ ಮನೆಯಲ್ಲಿ ಕೂಡ ಸುಲಭವಾಗಿ ಮಾಡಬಹುದು. ಚಪಾತಿ, ನಾನ್ ಅಥವಾ ಜೀರಾ ರೈಸ್ ಜೊತೆ ಸವಿದರೆ ತುಂಬಾ ರುಚಿಯಾಗಿರುತ್ತೆ.

ಬೇಕಾಗುವ ಪದಾರ್ಥಗಳು

ಪಾಲಕ್ ಸೊಪ್ಪು – 2 ಕಪ್ (ಸ್ವಚ್ಛವಾಗಿ ತೊಳೆದು ಕತ್ತರಿಸಿದ್ದು)
ಪನೀರ್ – 200 ಗ್ರಾಂ
ಈರುಳ್ಳಿ – 1
ಟೊಮೇಟೊ – 2
ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಚಮಚ
ಹಸಿಮೆಣಸಿನಕಾಯಿ – 1
ಮೆಣಸಿನ ಪುಡಿ – 1 ಚಮಚ
ಧನಿಯಾ ಪುಡಿ – 1 ಚಮಚ
ಗರಂ ಮಸಾಲಾ – ½ ಚಮಚ
ಅರಿಶಿನ – ¼ ಚಮಚ
ಕ್ರೀಮ್ ಅಥವಾ ಹಾಲು – 2 ಚಮಚ (ಐಚ್ಛಿಕ)
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ/ಬೆಣ್ಣೆ – 2 ಚಮಚ

ಮಾಡುವ ವಿಧಾನ

ಪಾಲಕ್ ಸೊಪ್ಪನ್ನು 3–4 ನಿಮಿಷ ನೀರಿನಲ್ಲಿ ಬೇಯಿಸಿ ತಣ್ಣಗಾದ ಮೇಲೆ ಮಿಕ್ಸಿಯಲ್ಲಿ ಹಸಿಮೆಣಸಿನಕಾಯಿಯೊಂದಿಗೆ ಸ್ಮೂತ್ ಪೇಸ್ಟ್ ಮಾಡಿ.

ಕಡಾಯಿಯಲ್ಲಿ ಸ್ವಲ್ಪ ಎಣ್ಣೆ ಅಥವಾ ಬೆಣ್ಣೆ ಹಾಕಿ ಪನೀರ್ ತುಂಡುಗಳನ್ನು ಲೈಟ್ ಗೋಲ್ಡನ್ ಬಣ್ಣ ಬರುವವರೆಗೆ ಹುರಿದು ತೆಗೆದು ಇಡಿ. ಇದರಿಂದ ಪನೀರ್ ರುಚಿ ಹೆಚ್ಚಾಗುತ್ತದೆ.

ಅದೇ ಕಡಾಯಿಯಲ್ಲಿ ಈರುಳ್ಳಿ ಹಾಕಿ ಹುರಿದು, ನಂತರ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸೇರಿಸಿ. ಟೊಮೇಟೊ ಪೇಸ್ಟ್ ಹಾಕಿ ಎಣ್ಣೆ ಬಿಡುವವರೆಗೆ ಚೆನ್ನಾಗಿ ಬೇಯಿಸಿ. ಈಗ ಅರಿಶಿನ, ಮೆಣಸಿನ ಪುಡಿ, ಧನಿಯಾ ಪುಡಿ ಹಾಕಿ ಕಲಸಿ. ಈಗ ಪಾಲಕ್ ಪೇಸ್ಟ್ ಸೇರಿಸಿ ಸ್ವಲ್ಪ ನೀರು ಹಾಕಿ ಮಧ್ಯಮ ಉರಿಯಲ್ಲಿ ಕುದಿಯಲು ಬಿಡಿ.

ಹುರಿದ ಪನೀರ್ ತುಂಡುಗಳನ್ನು ಗ್ರೇವಿಗೆ ಹಾಕಿ 4–5 ನಿಮಿಷ ಸಣ್ಣ ಉರಿಯಲ್ಲಿ ಬೇಯಿಸಿ. ಕೊನೆಯಲ್ಲಿ ಗರಂ ಮಸಾಲಾ ಮತ್ತು ಕ್ರೀಮ್/ಹಾಲು ಸೇರಿಸಿದರೆ ಢಾಬಾ ಸ್ಟೈಲ್ ರಿಚ್ ರುಚಿ ಬರುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !