April 11, 2026
Saturday, April 11, 2026
spot_img

ಪಲ್ಯ, ಗ್ರೇವಿ & More 20 | ಅಬ್ಬಬ್ಬಾ! ಎಂಥಾ ರುಚಿ ಈ ಬಟರ್ ಮಶ್ರೂಮ್ ಮಸಾಲಾ

ಹೋಟೆಲ್ ಸ್ಟೈಲ್ ರುಚಿ ಮನೆಯಲ್ಲಿ ಸಿಗಬೇಕೆಂದರೆ ಈ ಬಟರ್ ಮಶ್ರೂಮ್ ಮಸಾಲಾ ಒಮ್ಮೆ ಟ್ರೈ ಮಾಡಲೇಬೇಕು. ಸಾಫ್ಟ್ ಮಶ್ರೂಮ್, ಬೆಣ್ಣೆಯ ಸುವಾಸನೆ ಮತ್ತು ಕ್ರೀಮಿ ಮಸಾಲಾ, ರಿಚ್ ಗ್ರೇವಿ ಟೇಸ್ಟ್. ಚಪಾತಿ, ರೊಟ್ಟಿ, ನಾನ್ ಅಥವಾ ಜೀರಿಗೆ ರೈಸ್ ಜೊತೆ ಸರ್ವ್ ಮಾಡಿದರೆ ಸಖತ್ ರುಚಿ.

ಬೇಕಾಗುವ ಪದಾರ್ಥಗಳು

ಮಶ್ರೂಮ್ – 200 ಗ್ರಾಂ
ಬೆಣ್ಣೆ – 2 ಟೇಬಲ್ ಸ್ಪೂನ್
ಈರುಳ್ಳಿ – 2
ಟೊಮೇಟೊ – 2
ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಟೀ ಸ್ಪೂನ್
ಮೆಣಸಿನ ಪುಡಿ – 1 ಟೀ ಸ್ಪೂನ್
ಅರಿಶಿಣ – ¼ ಟೀ ಸ್ಪೂನ್
ಗರಂ ಮಸಾಲಾ – ½ ಟೀ ಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಕಾಜು ಪೇಸ್ಟ್ ಅಥವಾ ಫ್ರೆಶ್ ಕ್ರೀಮ್ – 2 ಟೇಬಲ್ ಸ್ಪೂನ್
ಕೊತ್ತಂಬರಿ ಸೊಪ್ಪು – ಅಲಂಕಾರಕ್ಕೆ

ಮಾಡುವ ವಿಧಾನ

ಮೊದಲು ಪ್ಯಾನ್‌ನಲ್ಲಿ ಬೆಣ್ಣೆ ಹಾಕಿ ಕರಗಿಸಿ. ಅದಕ್ಕೆ ಈರುಳ್ಳಿ ಹಾಕಿ ಬಂಗಾರದ ಬಣ್ಣ ಬರುವವರೆಗೆ ಹುರಿಯಿರಿ. ಈಗ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಸುಗಂಧ ಬರುವವರೆಗೆ ಫ್ರೈ ಮಾಡಿ. ಟೊಮೇಟೊ ಪ್ಯೂರಿ ಸೇರಿಸಿ ಎಣ್ಣೆ ಬೇರ್ಪಡುವವರೆಗೆ ಬೇಯಿಸಿ.

ಈಗ ಅರಿಶಿಣ, ಮೆಣಸಿನ ಪುಡಿ, ಉಪ್ಪು ಸೇರಿಸಿ ಮಿಕ್ಸ್ ಮಾಡಿ. ಕತ್ತರಿಸಿದ ಮಶ್ರೂಮ್ ಸೇರಿಸಿ 5–7 ನಿಮಿಷ ಮುಚ್ಚಿ ಬೇಯಿಸಿ. ಕೊನೆಗೆ ಕಾಜು ಪೇಸ್ಟ್ ಅಥವಾ ಕ್ರೀಮ್ ಮತ್ತು ಗರಂ ಮಸಾಲಾ ಸೇರಿಸಿ 2 ನಿಮಿಷ ಕುದಿಸಿ. ಕೊತ್ತಂಬರಿ ಸೊಪ್ಪು ಹಾಕಿ ಬಿಸಿ ಬಿಸಿ ಸರ್ವ್ ಮಾಡಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !