April 4, 2026
Saturday, April 4, 2026
spot_img

ಪಲ್ಯ, ಗ್ರೇವಿ & More 35 | ಕ್ಯಾಪ್ಸಿಕಂ ಇದ್ರೆ ಒಮ್ಮೆ ಈ ರೀತಿ ಮಸಾಲಾ ಕರಿ ಮಾಡಿ ನೋಡಿ, ಸೇಮ್ ಹೊಟೇಲ್ ಸ್ಟೈಲ್ ರುಚಿ

ಸರಳವಾದ ಪದಾರ್ಥಗಳಲ್ಲಿ ಬೇಗ ತಯಾರಿಸಬಹುದಾದ ರುಚಿಯಾದ ಅಡುಗೆ ಅಂದ್ರೆ ಕ್ಯಾಪ್ಸಿಕಂ ಕರಿ. ಕ್ಯಾಪ್ಸಿಕಂನಲ್ಲಿ ವಿಟಮಿನ್ C ಮತ್ತು ಹಲವು ಪೋಷಕಾಂಶಗಳು ಇರುವುದರಿಂದ ಇದು ಆರೋಗ್ಯಕ್ಕೂ ಒಳ್ಳೆಯದು. ಚಪಾತಿ, ರೋಟಿ ಅಥವಾ ಅನ್ನದ ಜೊತೆ ತಿನ್ನಲು ಸೂಪರ್ ಆಗಿರುವ ಈ ಕರಿ ಕಡಿಮೆ ಸಮಯದಲ್ಲೇ ತಯಾರಾಗುತ್ತೆ.

ಬೇಕಾಗುವ ಪದಾರ್ಥಗಳು

ಕ್ಯಾಪ್ಸಿಕಂ – 2
ಈರುಳ್ಳಿ – 1
ಟೊಮೇಟೊ – 1
ಬೆಳ್ಳುಳ್ಳಿ – 3 ಎಸಳು
ಅರಿಶಿನ – ¼ ಟೀ ಸ್ಪೂನ್
ಕೆಂಪು ಮೆಣಸಿನ ಪುಡಿ – 1 ಟೀ ಸ್ಪೂನ್
ಧನಿಯಾ ಪುಡಿ – 1 ಟೀ ಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – 2 ಟೇಬಲ್ ಸ್ಪೂನ್
ಸಾಸಿವೆ – ½ ಟೀ ಸ್ಪೂನ್
ಜೀರಿಗೆ – ½ ಟೀ ಸ್ಪೂನ್
ಕರಿಬೇವು – ಸ್ವಲ್ಪ
ಕೊತ್ತಂಬರಿ ಸೊಪ್ಪು – ಸ್ವಲ್ಪ

ಮಾಡುವ ವಿಧಾನ

ಮೊದಲು ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಸಾಸಿವೆ ಮತ್ತು ಜೀರಿಗೆ ಹಾಕಿ, ನಂತರ ಕರಿಬೇವು ಮತ್ತು ಬೆಳ್ಳುಳ್ಳಿ ಹಾಕಿ ಸ್ವಲ್ಪ ಹುರಿಯಿರಿ.

ಆಮೇಲೆ ಈರುಳ್ಳಿ ಹಾಕಿ ಬಂಗಾರದ ಬಣ್ಣ ಬರುವವರೆಗೆ ಹುರಿಯಿರಿ. ನಂತರ ಟೊಮೇಟೊ ಸೇರಿಸಿ ಚೆನ್ನಾಗಿ ಮೃದುವಾಗುವವರೆಗೆ ಬೇಯಿಸಿರಿ. ಇದಕ್ಕೆ ಅರಿಶಿನ, ಮೆಣಸಿನ ಪುಡಿ, ಧನಿಯಾ ಪುಡಿ ಮತ್ತು ಉಪ್ಪು ಹಾಕಿ ಚೆನ್ನಾಗಿ ಕಲಸಿ. ನಂತರ ಕತ್ತರಿಸಿದ ಕ್ಯಾಪ್ಸಿಕಂ ಸೇರಿಸಿ ಮಿತವಾದ ಉರಿಯಲ್ಲಿ 5–7 ನಿಮಿಷ ಬೇಯಲು ಬಿಡಿ.

ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿ ಕಲಸಿದರೆ ರುಚಿಯಾದ ಕ್ಯಾಪ್ಸಿಕಂ ಕರಿ ಸಿದ್ಧ. ಚಪಾತಿ, ರೋಟಿ ಅಥವಾ ಅನ್ನದ ಜೊತೆ ಸರ್ವ್ ಮಾಡಿದರೆ ತುಂಬಾ ರುಚಿಯಾಗಿರುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !