April 2, 2026
Thursday, April 2, 2026
spot_img

ಪಲ್ಯ, ಗ್ರೇವಿ & More 52 | ದೋಸೆ, ಚಪಾತಿ ಜೊತೆನೂ ತಿನ್ಬಹುದು ಈ ಉತ್ತರ ಕರ್ನಾಟಕ ಸ್ಟೈಲ್ ಹೆಸರು ಕಾಳು ಪಲ್ಯ

ಉತ್ತರ ಕರ್ನಾಟಕದ ಅಡುಗೆ ಅಂದ್ರೆ ಸರಳ ಪದಾರ್ಥಗಳಿಂದ ಅದ್ಭುತ ರುಚಿ ಸಿಗುತ್ತೆ ಅಂತ ಅರ್ಥ. ಅದರಲ್ಲಿ ಹೆಸರು ಕಾಳು ಪಲ್ಯ ಒಂದು ತುಂಬಾ ಜನಪ್ರಿಯ ಸೈಡ್ ಡಿಶ್. ಜೋಳದ ರೊಟ್ಟಿ, ಚಪಾತಿ, ದೋಸೆ ಅಥವಾ ಅನ್ನದ ಜೊತೆ ಇದನ್ನು ಸವಿದರೆ ತುಂಬಾ ರುಚಿಯಾಗಿರುತ್ತೆ.

ಬೇಕಾಗುವ ಸಾಮಗ್ರಿಗಳು

ಹೆಸರು ಕಾಳು – 1 ಕಪ್
ಈರುಳ್ಳಿ – 1 ದೊಡ್ಡದು (ಸಣ್ಣದಾಗಿ ಕತ್ತರಿಸಿದ್ದು)
ಟೊಮ್ಯಾಟೊ – 1
ಹಸಿಮೆಣಸು – 2
ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಟೀ ಸ್ಪೂನ್
ಅರಿಶಿನ – ¼ ಟೀ ಸ್ಪೂನ್
ಖಾರದ ಪುಡಿ – 1 ಟೀ ಸ್ಪೂನ್
ಧನಿಯಾ ಪುಡಿ – 1 ಟೀ ಸ್ಪೂನ್
ಜೀರಿಗೆ ಪುಡಿ – ½ ಟೀ ಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಕೊತ್ತಂಬರಿ ಸೊಪ್ಪು – ಸ್ವಲ್ಪ
ಎಣ್ಣೆ – 2 ಟೇಬಲ್ ಸ್ಪೂನ್

ಒಗ್ಗರಣೆಗೆ
ಸಾಸಿವೆ – ½ ಟೀ ಸ್ಪೂನ್
ಜೀರಿಗೆ – ½ ಟೀ ಸ್ಪೂನ್
ಕರಿಬೇವು – ಸ್ವಲ್ಪ
ಒಣ ಮೆಣಸು – 1

ಮಾಡುವ ವಿಧಾನ

ಮೊದಲು ಹೆಸರು ಕಾಳನ್ನು 4–5 ಗಂಟೆ ನೆನೆಸಿಡಿ. ನಂತರ ಕುಕ್ಕರ್‌ನಲ್ಲಿ ಸ್ವಲ್ಪ ಉಪ್ಪು ಮತ್ತು ನೀರು ಹಾಕಿ 2–3 ವಿಶಿಲ್ ಬರುವವರೆಗೆ ಬೇಯಿಸಿ.

ಈಗ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಸಾಸಿವೆ, ಜೀರಿಗೆ, ಕರಿಬೇವು ಮತ್ತು ಒಣ ಮೆಣಸು ಹಾಕಿ ಒಗ್ಗರಣೆ ಮಾಡಿ.

ನಂತರ ಈರುಳ್ಳಿ ಹಾಕಿ ಗೋಲ್ಡನ್ ಬಣ್ಣ ಬರುವವರೆಗೆ ಹುರಿಯಿರಿ. ಬಳಿಕ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಹಸಿಮೆಣಸು ಮತ್ತು ಟೊಮ್ಯಾಟೊ ಹಾಕಿ ಚೆನ್ನಾಗಿ ಬೇಯಿಸಿ.

ಇದಕ್ಕೆ ಅರಿಶಿನ, ಖಾರದ ಪುಡಿ, ಧನಿಯಾ ಪುಡಿ ಮತ್ತು ಜೀರಿಗೆ ಪುಡಿ ಸೇರಿಸಿ ಸ್ವಲ್ಪ ನೀರು ಹಾಕಿ ಮಸಾಲೆ ಚೆನ್ನಾಗಿ ಕುದಿಯಲು ಬಿಡಿ.

ಕೊನೆಯಲ್ಲಿ ಬೇಯಿಸಿದ ಹೆಸರು ಕಾಳು ಸೇರಿಸಿ 5 ನಿಮಿಷ ಸಿಮ್‌ನಲ್ಲಿ ಬೇಯಿಸಿ. ಮೇಲೆ ಕೊತ್ತಂಬರಿ ಸೊಪ್ಪು ಹಾಕಿ ಇಳಿಸಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !