Wednesday, December 10, 2025

ಭಾರತಕ್ಕೆ ಪಾಂಡ್ಯ ಬಲ: ಸೌತ್ ಆಫ್ರಿಕಾಗೆ 176 ರನ್ ಟಾರ್ಗೆಟ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಸೌತ್ ಆಫ್ರಿಕಾ ವಿರುದ್ದ ಮೊದಲ ಟ20 ಪಂದ್ಯದಲ್ಲಿ ಟೀಂ ಇಂಡಿಯಾಕ್ಕೆ ಹಾರ್ದಿಕ್ ಪಾಂಡ್ಯ ಸ್ಫೋಟಕ ಬ್ಯಾಟಿಂಗ್ ಮೂಲಕ ಸಾಥ್ ನೀಡಿದ್ದು, ಭಾರತ 6 ವಿಕೆಟ್ ನಷ್ಟಕ್ಕೆ 175 ರನ್ ಸಿಡಿಸಿದೆ.

ಟಾಸ್ ಸೋತ ಭಾರತ ಆರಂಭದಲ್ಲೇ ಹಿನ್ನಡೆ ಅನುಭವಿಸಿತು. ಶುಬಮನ್ ಗಿಲ್ ಕೇವಲ 4 ರನ್ ಸಿಡಿಸಿ ನಿರ್ಗಮಿಸಿದರೆ, ಅಭಿಷೇಕ್ ಶರ್ಮಾ 17 ರನ್ ಸಿಡಿಸಿ ಔಟಾದರು. ನಾಯಕ ಸೂರ್ಯಕುಮಾರ್ ಯಾದವ್ 12 ರನ್ ಸಿಡಿಸಿ ಔಟಾದರು. ಆರಂಭಿಕ ಮೂರು ವಿಕೆಟ್ ಪತನದಿಂದ ಟೀಂ ಇಂಡಿಯಾ ಸಂಕಷ್ಟಕ್ಕೆ ಸಿಲುಕಿತು. ಇತ್ತ ತಿಲಕ್ ವರ್ಮಾ 25 ಹಾಗೂ ಅಕ್ಸರ್ ಪಟೇಲ್ 23 ರನ್ ಸಿಡಿಸಿ ನೆರವಾದರು. ಆದರೂ ಭಾರತ ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿ ಎದುರಿಸಿತ್ತು.

ಅಂತಿಮ ಹಂತದಲ್ಲಿ ಹಾರ್ದಿಕ್ ಪಾಂಡ್ಯ ಪಂದ್ಯದ ಗತಿ ಬದಲಿಸಿದರು. ಇತ್ತ ಶಿವಂ ದುಬೆ 11 ರನ್‌ಗೆ ನಿರ್ಗಮಿಸಿದರು.ಆದರೆ ಹಾರ್ದಿಕ್ ಪಾಂಡ್ಯ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದರು. 28 ಎಸೆತದಲ್ಲಿ 6 ಬೌಂಡರಿ ಹಾಗೂ 4 ಸಿಕ್ಸರ್ ಸಿಡಿಸಿದರು. ಈ ಮೂಲಕ ಅಜೇಯ 59 ರನ್ ಸಿಡಿಸಿದರು. ಇತ್ತ ಜಿತೇಶ್ ಶರ್ಮಾ ಅಜೇಯ 10 ರನ್ ಸಿಡಿಸಿದರು. ಇದರೊಂದಿಗೆ ಭಾರತ 6 ವಿಕೆಟ್ ನಷ್ಟಕ್ಕೆ 175 ರನ್ ಸಿಡಿಸಿತು.

error: Content is protected !!