March 15, 2026
Sunday, March 15, 2026
spot_img

Parenting | ಮಕ್ಕಳಲ್ಲಿ ಡಯಾಬಿಟಿಸ್‌ ಬಾರದಂತೆ ನೋಡ್ಕೊಳ್ಳೋದು ಹೇಗೆ? ಪೋಷಕರಾಗಿ ಈ ವಿಷ್ಯ ತಿಳಿದಿರಲಿ

ಇವತ್ತಿನ ಜೀವನಶೈಲಿ ಮಕ್ಕಳ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ. ಚಿಕ್ಕ ವಯಸ್ಸಿನಲ್ಲೇ ಡಯಾಬಿಟಿಸ್ ಕಾಣಿಸಿಕೊಳ್ಳೋದು ಈಗ ಅಪರೂಪ ಅಲ್ಲ. ಆದ್ರೆ ಪೋಷಕರಾಗಿ ನಾವು ಸ್ವಲ್ಪ ಗಮನ ಕೊಟ್ಟರೆ ಇದನ್ನ ಸಾಕಷ್ಟು ಮಟ್ಟಿಗೆ ತಪ್ಪಿಸಬಹುದು. ಮಕ್ಕಳಿಗೆ ಏನು ತಿನ್ನಿಸುತ್ತೇವೆ, ಅವರು ಹೇಗೆ ಜೀವನ ನಡೆಸುತ್ತಾರೆ ಅನ್ನೋದು ಬಹಳ ಮುಖ್ಯ.

ಮಕ್ಕಳ ಆರೋಗ್ಯ ಕಾಪಾಡೋಕೆ ಪೋಷಕರು ಗಮನಿಸಬೇಕಾದ ಕೆಲವು ವಿಷಯಗಳು:

  • ಹೆಚ್ಚು ಸಕ್ಕರೆ ಇರುವ ಜಂಕ್ ಫುಡ್, ಚಾಕೊಲೇಟ್, ಸಾಫ್ಟ್ ಡ್ರಿಂಕ್ಸ್‌ ಕಡಿಮೆ ಮಾಡಬೇಕು
  • ಪ್ರತಿದಿನ ಹೊರಗೆ ಆಟ ಆಡುವ ಅಭ್ಯಾಸ ಬೆಳೆಸಬೇಕು
  • ಟಿವಿ, ಮೊಬೈಲ್ ಮುಂದೆ ಹೆಚ್ಚು ಸಮಯ ಕಳೆಯೋದು ತಪ್ಪಿಸಬೇಕು
  • ಹಣ್ಣು, ತರಕಾರಿ, ಮನೆಯ ಊಟಕ್ಕೆ ಹೆಚ್ಚು ಮಹತ್ವ ಕೊಡಬೇಕು
  • ಕುಟುಂಬದಲ್ಲಿ ಡಯಾಬಿಟಿಸ್ ಇತಿಹಾಸ ಇದ್ದರೆ ನಿಯಮಿತ ಆರೋಗ್ಯ ತಪಾಸಣೆ ಮಾಡಿಸಬೇಕು

ಸಣ್ಣ ವಯಸ್ಸಿನಲ್ಲೇ ಸರಿಯಾದ ಆಹಾರ ಹಾಗೂ ಜೀವನಶೈಲಿ ಕಲಿಸಿದರೆ, ಮಕ್ಕಳನ್ನು ಆರೋಗ್ಯಕರ ಭವಿಷ್ಯದ ಕಡೆಗೆ ಕರೆದೊಯ್ಯಬಹುದು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !