Monday, September 8, 2025

Parenting Tips | ಮಕ್ಕಳ ಹಠಮಾರಿತನ ಕಡಿಮೆ ಮಾಡೋದು ಹೇಗೆ? ಅವರನ್ನು ಸುಧಾರಿಸೋಕೆ ಇಲ್ಲಿದೆ ಟಿಪ್ಸ್

ಮಕ್ಕಳು ಅಂದ್ರೇನೆ ಸಂತೋಷ, ಆದರೆ ಕೆಲವೊಮ್ಮೆ ಅವರ ಹಠ ಪೋಷಕರಿಗೆ ದೊಡ್ಡ ಸವಾಲಾಗಿಬಿಡುತ್ತದೆ. ಸಣ್ಣ ವಿಷಯಗಳಲ್ಲೂ ಹಠಮಾಡುವುದು ಮಕ್ಕಳ ಸಹಜ ಗುಣವಾಗಿದ್ದರೂ, ಅದು ಅತಿಯಾಗಿ ಬೆಳೆದರೆ ಪೋಷಕರಿಗೆ ಒತ್ತಡ ತರುವಂತಾಗುತ್ತದೆ. ಹಠಮಾರಿತನವನ್ನು ಗದರಿಕೆಯಿಂದ ಅಥವಾ ಬಲವಂತದಿಂದ ನಿಯಂತ್ರಿಸಲು ಪ್ರಯತ್ನಿಸುವುದರಿಂದ ಫಲ ಸಿಗುವುದಿಲ್ಲ. ಬದಲಿಗೆ ಪ್ರೀತಿ, ಸಹನೆ ಮತ್ತು ಸಮಾಧಾನದಿಂದ ಮಕ್ಕಳ ಹಠವನ್ನು ತಡೆಗಟ್ಟಬಹುದು.

–ಮಾತು ಕೇಳಿ ಪ್ರೀತಿಯಿಂದ ತಿಳಿಸಿ
ಮಗು ಹಠ ಮಾಡಿದಾಗ ಗದರಿಸದೇ ಅವರ ಮಾತು ಸಂಪೂರ್ಣವಾಗಿ ಆಲಿಸಿ. ನಂತರ ಪ್ರೀತಿಯಿಂದ ತಪ್ಪು ಸರಿ ತಿಳಿಸಿದರೆ ಅವರು ಬೇಗ ಒಪ್ಪಿಕೊಳ್ಳುತ್ತಾರೆ.

– ಒತ್ತಡ ಹಾಕಬೇಡಿ
ಓದು, ಊಟ ಅಥವಾ ಆಟದ ವಿಚಾರದಲ್ಲಿ ಮಕ್ಕಳ ಮೇಲೆ ಬಲವಂತ ಮಾಡಬೇಡಿ. ಅವರಿಗೆ ಸ್ವಲ್ಪ ಸಮಯ ನೀಡಿ, ನಂತರ ಪ್ರೇರೇಪಿಸಿ.

– ಗಮನ ತಿರುಗಿಸಿ
ಟಿವಿ ನೋಡಬೇಕು ಎಂದು ಹಠ ಮಾಡಿದರೆ, ಕಥೆ ಹೇಳುವುದು, ಆಟ ಆಡುವುದು ಅಥವಾ ಸೈಕಲ್ ಓಡಿಸುವಂಥ ಪರ್ಯಾಯಗಳನ್ನು ನೀಡಿ.

– ಪ್ರೋತ್ಸಾಹ ನೀಡಿ
ಸಣ್ಣ ಸಾಧನೆಗಳಿಗೂ ಶ್ಲಾಘನೆ ಮಾಡಿ. ಕಡಿಮೆ ಅಂಕ ಬಂದರೂ ಗದರಿಸದೆ ಮುಂದಿನ ಸಲ ಚೆನ್ನಾಗಿ ಮಾಡು ಎಂದು ಪ್ರೇರೇಪಿಸಿ.

ಇದನ್ನೂ ಓದಿ