ಇತ್ತೀಚಿನ ದಿನಗಳಲ್ಲಿ ಸಣ್ಣ ಮಕ್ಕಳಲ್ಲಿ “ಅರ್ಲಿ ಪೀರಿಯಡ್ಸ್” ಆರಂಭವಾಗುತ್ತಿರುವುದು ವೈದ್ಯಕೀಯವಾಗಿ ಗಮನ ಸೆಳೆದಿದೆ. ಇದಕ್ಕೆ ಅನೇಕ ಕಾರಣಗಳು ಇರಬಹುದು. ಆಹಾರ ಪದ್ಧತಿ, ಜೀವನಶೈಲಿ, ಒತ್ತಡ ಮತ್ತು ಪರಿಸರದ ಪರಿಣಾಮಗಳು ಪ್ರಮುಖವಾಗಿವೆ. ಮಕ್ಕಳಲ್ಲಿ ಆರೋಗ್ಯಕರ ಬೆಳವಣಿಗೆಗೆ ಈ ಹಂತ ತಡವಾಗಿ ಬರಬೇಕು ಎನ್ನುವುದು ತಜ್ಞರ ಅಭಿಪ್ರಾಯ. ಹಾಗಾದರೆ, ಯಾವ ಅಭ್ಯಾಸಗಳನ್ನು ತಪ್ಪಿಸಬೇಕು ಎನ್ನುವುದನ್ನು ನೋಡೋಣ.
- ಜಂಕ್ ಫುಡ್ ಸೇವನೆ ಕಡಿಮೆ ಮಾಡಬೇಕು: ಬರ್ಗರ್, ಪಿಜ್ಜಾ, ಪ್ಯಾಕೇಜ್ಡ್ ಸ್ನ್ಯಾಕ್ಸ್‌ಗಳಂತಹ ಆಹಾರಗಳಲ್ಲಿ ಟ್ರಾನ್ಸ್‌ಫ್ಯಾಟ್ ಮತ್ತು ಹಾರ್ಮೋನ್ ಅಸಮತೋಲನ ಉಂಟುಮಾಡುವ ರಾಸಾಯನಿಕಗಳು ಇರುತ್ತವೆ. ಇವು ದೇಹದ ಒಳಗಿನ ಈಸ್ಟ್ರೋಜನ್ ಮಟ್ಟವನ್ನು ಹೆಚ್ಚಿಸಬಹುದು. ಆದ್ದರಿಂದ ಮಕ್ಕಳಿಗೆ ನೈಸರ್ಗಿಕ ಆಹಾರ — ಹಣ್ಣುಗಳು, ತರಕಾರಿಗಳು ಮತ್ತು ಧಾನ್ಯಗಳು ಒಳಗೊಂಡ ಆಹಾರ ಹೆಚ್ಚು ನೀಡುವುದು ಉತ್ತಮ.
- ಪ್ಲಾಸ್ಟಿಕ್ ಬಳಕೆ ತಪ್ಪಿಸಬೇಕು: ಪ್ಲಾಸ್ಟಿಕ್ ಬಾಟಲ್‌ಗಳು ಅಥವಾ ಪ್ಲಾಸ್ಟಿಕ್ ಕಂಟೇನರ್‌ಗಳಲ್ಲಿ ನೀರು ಅಥವಾ ಆಹಾರವನ್ನು ಇಡುವುದರಿಂದ ಹಾನಿಕರ ರಾಸಾಯನಿಕಗಳು ದೇಹಕ್ಕೆ ಸೇರುತ್ತವೆ. ಇವು “ಎಂಡೋಕ್ರೈನ್ ಡಿಸ್ರಪ್ಟರ್‌ಗಳು” ಎಂದು ಕರೆಯಲ್ಪಡುವುವ ರಾಸಾಯನಿಕವು ಹಾರ್ಮೋನ್ ಸಮತೋಲನವನ್ನು ಹಾಲು ಮಾಡುತ್ತದೆ. ಸ್ಟೀಲ್ ಅಥವಾ ಗಾಜಿನ ಪಾತ್ರೆಗಳಲ್ಲಿ ಆಹಾರ ನೀಡುವುದು ಸುರಕ್ಷಿತ.
- ಸ್ಕ್ರೀನ್ ಟೈಮ್ ನಿಯಂತ್ರಿಸಬೇಕು: ಮೊಬೈಲ್, ಟಿವಿ ಅಥವಾ ಟ್ಯಾಬ್‌ಗಳಲ್ಲಿ ಹೆಚ್ಚು ಸಮಯ ಕಳೆಯುವುದರಿಂದ ಮಕ್ಕಳ ಶಾರೀರಿಕ ಚಟುವಟಿಕೆ ಕಡಿಮೆಯಾಗುತ್ತದೆ. ಈ ಜೀವನಶೈಲಿಯು ದೇಹದ ತೂಕ ಹೆಚ್ಚಿಸುವ ಮೂಲಕ ಹಾರ್ಮೋನಲ್ ಬದಲಾವಣೆ ತರಬಹುದು. ಪ್ರತಿದಿನ ಹೊರ ಆಟ ಅಥವಾ ವ್ಯಾಯಾಮಕ್ಕೆ ಉತ್ತೇಜನ ನೀಡುವುದು ಅಗತ್ಯ.
- ಸಕ್ಕರೆ ಮತ್ತು ಸಾಫ್ಟ್ ಡ್ರಿಂಕ್ಸ್ ತಪ್ಪಿಸಬೇಕು: ಅತಿಯಾದ ಸಕ್ಕರೆ ಸೇವನೆಯು ದೇಹದ ಕೊಬ್ಬಿನ ಪ್ರಮಾಣ ಹೆಚ್ಚಿಸುತ್ತದೆ. ಇದು ಕೂಡ ಪೀರಿಯಡ್ಸ್ ಬೇಗ ಬರುವ ಕಾರಣಗಳಲ್ಲಿ ಒಂದಾಗಿದೆ. ಬದಲಿಗೆ ನೈಸರ್ಗಿಕ ಪಾನೀಯಗಳಾದ ಹಾಲು, ತಾಜಾ ಹಣ್ಣಿನ ರಸ ಅಥವಾ ನೀರಿನ ಸೇವನೆಯನ್ನು ಪ್ರೋತ್ಸಾಹಿಸಬೇಕು.
- ಒತ್ತಡ ಮತ್ತು ನಿದ್ರೆ ಕೊರತೆ ತಪ್ಪಿಸಬೇಕು: ಮಾನಸಿಕ ಒತ್ತಡವೂ ಹಾರ್ಮೋನ್ಗಳ ಮೇಲೆ ಪರಿಣಾಮ ಬೀರುತ್ತದೆ. ಪಾಠ, ಸ್ಪರ್ಧೆ ಅಥವಾ ಹೆತ್ತವರ ಮಾತಿನ ಒತ್ತಡದಿಂದ ಮಕ್ಕಳು ಮಾನಸಿಕ ಅಶಾಂತಿ ಅನುಭವಿಸಿದರೆ ದೇಹದ ಚಕ್ರ ಬದಲಾಗಬಹುದು. ಸಾಕಷ್ಟು ನಿದ್ರೆ ಮತ್ತು ಸಮತೋಲನದ ದಿನಚರಿಯು ಆರೋಗ್ಯಕರ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.

