Sunday, January 11, 2026

ಬೆಂಗಳೂರಿಗರಿಗೆ ಪಾರ್ಕಿಂಗ್ ಶಾಕ್: ಸಿಕ್ಕಸಿಕ್ಕಲ್ಲಿ ಗಾಡಿ ನಿಲ್ಲಿಸುವ ಮುನ್ನ ಜೇಬಿನ ಬಗ್ಗೆ ಯೋಚಿಸಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟ್ರಾಫಿಕ್ ಕಿರಿಕಿರಿ ಮತ್ತು ಬೇಕಾಬಿಟ್ಟಿ ಪಾರ್ಕಿಂಗ್‌ಗೆ ಬ್ರೇಕ್ ಹಾಕಲು ಮುಂದಾಗಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರ, ಇದೀಗ ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ನಿಲುಗಡೆಗೆ ಶುಲ್ಕ ವಿಧಿಸಲು ಸಜ್ಜಾಗಿದೆ. ಈಗಾಗಲೇ ವಿವಿಧ ತೆರಿಗೆಗಳ ಹೊರೆಯಿಂದ ಕಂಗಾಲಾಗಿರುವ ಜನಸಾಮಾನ್ಯರಿಗೆ ಈ ‘ಪಾರ್ಕಿಂಗ್ ಪೆನಾಲ್ಟಿ’ ಮತ್ತೊಂದು ಬರೆ ಎಳೆದಂತಾಗಿದೆ.

ಪ್ರಾಧಿಕಾರವು ಮೊದಲ ಹಂತದಲ್ಲಿ ನಗರದ ಪ್ರಮುಖ ವಲಯಗಳಾದ ಸಿಬಿಡಿ, ಹೆಬ್ಬಾಳ ಮತ್ತು ಯಲಹಂಕ ಭಾಗದ ರಸ್ತೆಗಳಲ್ಲಿ ಈ ನಿಯಮ ಜಾರಿಗೆ ತರುತ್ತಿದೆ.

ಹೆಬ್ಬಾಳ ವಲಯ: ಟ್ಯಾಂಕ್ ಬಂಡ್ ರಸ್ತೆ, ತರಳಬಾಳು ರಸ್ತೆ, ಭೂಪಸಂದ್ರ ಮುಖ್ಯ ರಸ್ತೆ.

ಯಲಹಂಕ ವಲಯ: ಯಲಹಂಕ ಹೊಸ ಪಟ್ಟಣದ ವಾರ್ಡ್ ಸಂಖ್ಯೆ 5ರ 1ನೇ ಎ, 13ನೇ ಎ ಮುಖ್ಯ ರಸ್ತೆಗಳು, ಸಂದೀಪ್ ಉನ್ನಿಕೃಷ್ಣ ರಸ್ತೆ ಸೇರಿದಂತೆ ಪ್ರಮುಖ ಅಡ್ಡ ರಸ್ತೆಗಳು.

ಬೀದಿಗಳಲ್ಲಿ ವಾಹನ ನಿಲ್ಲಿಸಲು ಇನ್ಮುಂದೆ ಗಂಟೆವಾರು ಅಥವಾ ಮಾಸಿಕ ಬಾಡಿಗೆ ಪಾವತಿಸಬೇಕಾಗುತ್ತದೆ:

ನಗರದ ರಸ್ತೆಗಳಲ್ಲಿ ವಾಹನಗಳನ್ನು ಅಡ್ಡಾದಿಡ್ಡಿ ನಿಲ್ಲಿಸುವುದರಿಂದ ಸಂಚಾರ ದಟ್ಟಣೆ ಹೆಚ್ಚುತ್ತಿದೆ. ಇದನ್ನು ನಿಯಂತ್ರಿಸಲು ಮತ್ತು ಶಿಸ್ತುಬದ್ಧ ಪಾರ್ಕಿಂಗ್ ವ್ಯವಸ್ಥೆ ರೂಪಿಸಲು ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಾಧಿಕಾರ ತಿಳಿಸಿದೆ. ಆದರೆ, ಈಗಾಗಲೇ ಆಸ್ತಿ ತೆರಿಗೆ ಸೇರಿದಂತೆ ಇತರೆ ಶುಲ್ಕಗಳಿಂದ ಹೈರಾಣಾಗಿರುವ ಜನರಿಗೆ ಈ ಹೊಸ ಪಾರ್ಕಿಂಗ್ ದರ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

error: Content is protected !!