March 9, 2026
Monday, March 9, 2026
spot_img

ಪ್ರಯಾಣಿಕರೇ ಗಮನಿಸಿ..ಮಾರ್ಚ್​​ 15 ರಿಂದ ವಂದೇ ಭಾರತ್​ ರೈಲುಗಳ ವೇಳಾಪಟ್ಟಿ ಪರಿಷ್ಕರಣೆ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ನೈರುತ್ಯ ರೈಲ್ವೆ ಇಲಾಖೆಯು ವಂದೇ ಭಾರತ್​​ ಎಕ್ಸ್‌ಪ್ರೆಸ್​​ ರೈಲುಗಳ ವೇಳಾಪಟ್ಟಿಯನ್ನು ನಿಗದಿತ ನಿಲ್ದಾಣಗಳಲ್ಲಿ ಪರಿಷ್ಕರಿಸಿದೆ. ಮಾರ್ಚ್​​ 15 ರಿಂದ ಹೊಸ ವೇಳಾಪಟ್ಟಿ ಜಾರಿಗೆ ಬರಲಿದೆ.

  1. ರೈಲು ಸಂಖ್ಯೆ 20669 ಎಸ್‌ಎಸ್‌ಎಸ್ ಹುಬ್ಬಳ್ಳಿ–ಪುಣೆ ವಂದೇ ಭಾರತ್ ಎಕ್ಸ್‌ಪ್ರೆಸ್: ಬೆಳಗಾವಿ (07:05/07:10 ಗಂಟೆ) ಮತ್ತು ಘಟಪ್ರಭಾ (07:48/07:50 ಗಂಟೆ) ನಿಲ್ದಾಣಗಳಲ್ಲಿ ಪರಿಷ್ಕೃತ ಸಮಯವನ್ನು ಹೊಂದಿರುತ್ತದೆ.
  2. ರೈಲು ಸಂಖ್ಯೆ 20661 ಕೆಎಸ್ಆರ್ ಬೆಂಗಳೂರು–ಧಾರವಾಡ ವಂದೇ ಭಾರತ್ ಎಕ್ಸ್‌ಪ್ರೆಸ್: ದಾವಣಗೆರೆ (09:30/09:32 ಗಂಟೆ), ಹಾವೇರಿ (10:20/10:22 ಗಂಟೆ) ಮತ್ತು ಎಸ್‌ಎಸ್‌ಎಸ್ ಹುಬ್ಬಳ್ಳಿ (11:15/11:20 ಗಂಟೆ) ನಿಲ್ದಾಣಕ್ಕೆ ತಲುಪಿ, ನಿರ್ಗಮಿಸಲಿದೆ.
  3. ರೈಲು ಸಂಖ್ಯೆ 20662 ಧಾರವಾಡ–ಕೆಎಸ್ಆರ್ ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್: ಹಾವೇರಿ (14:48/14:50 ಗಂಟೆ) ಮತ್ತು ದಾವಣಗೆರೆ (15:33/15:35 ಗಂಟೆ) ನಿಲ್ದಾಣಗಳಲ್ಲಿ ಸಮಯ ಬದಲಾವಣೆಯಾಗಲಿದೆ. ತುಮಕೂರು ನಿಲ್ದಾಣದ ಸಮಯದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಹಾಗೂ ಯಶವಂತಪುರ ನಿಲ್ದಾಣಕ್ಕೆ 19:21/19:23 ಗಂಟೆಗೆ ತಲುಪಿ, ನಿರ್ಗಮಿಸಲಿದೆ.
  4. ರೈಲು ಸಂಖ್ಯೆ 26751 ಬೆಳಗಾವಿ – ಕೆಎಸ್ಆರ್ ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್: ಹಾವೇರಿ (08:42/08:44 ಗಂಟೆ), ದಾವಣಗೆರೆ (09:28/09:30 ಗಂಟೆ), ತುಮಕೂರು (12:15/12:17 ಗಂಟೆ) ಮತ್ತು ಯಶವಂತಪುರ (13:23/13:25 ಗಂಟೆ) ನಿಲ್ದಾಣಗಳಲ್ಲಿ ಪರಿಷ್ಕೃತ ಸಮಯವನ್ನು ಹೊಂದಿರುತ್ತದೆ.
  5. ರೈಲು ಸಂಖ್ಯೆ 20704 ಯಶವಂತಪುರ–ಕಾಚಿಗುಡ ವಂದೇ ಭಾರತ್ ಎಕ್ಸ್‌ಪ್ರೆಸ್: ಹಿಂದೂಪುರ ನಿಲ್ದಾಣದಲ್ಲಿ (15:55/15:57 ಗಂಟೆ) ಪರಿಷ್ಕೃತ ಸಮಯವನ್ನು ಹೊಂದಿರುತ್ತದೆ. ಅದೇ ರೀತಿ, ರೈಲು ಸಂಖ್ಯೆ 20703 ಕಾಚಿಗುಡ – ಯಶವಂತಪುರ ವಂದೇ ಭಾರತ್ ಎಕ್ಸ್‌ಪ್ರೆಸ್ ಹಿಂದೂಪುರದಲ್ಲಿ (12:17/12:19 ಗಂಟೆ) ಪರಿಷ್ಕೃತ ವೇಳಾಪಟ್ಟಿಯನ್ನು ಹೊಂದಿರುತ್ತದೆ.
  6. ರೈಲು ಸಂಖ್ಯೆ 22231 ಕಲಬುರಗಿ–ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್: ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯಂ (11:13/11:15 ಗಂಟೆ) ಮತ್ತು ಯಲಹಂಕ (12:58/13:00 ಗಂಟೆ) ನಿಲ್ದಾಣಗಳಲ್ಲಿ ಪರಿಷ್ಕೃತ ಸಮಯವನ್ನು ಹೊಂದಿರುತ್ತದೆ. ಹಿಂದಿರುಗುವ ದಿಕ್ಕಿನಲ್ಲಿ, ರೈಲು ಸಂಖ್ಯೆ 22232 ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು – ಕಲಬುರಗಿ ವಂದೇ ಭಾರತ್ ಎಕ್ಸ್‌ಪ್ರೆಸ್ ಯಲಹಂಕ (15:09/15:11 ಗಂಟೆ) ಮತ್ತು ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯಂ (16:45/16:47 ಗಂಟೆ) ನಿಲ್ದಾಣಗಳಲ್ಲಿ ಪರಿಷ್ಕೃತ ವೇಳಾಪಟ್ಟಿಯಂತೆ ಸಂಚರಿಸಲಿದೆ.
  7. ರೈಲು ಸಂಖ್ಯೆ 20642 ಕೊಯಮತ್ತೂರು – ಬೆಂಗಳೂರು ಕಂಟೋನ್ಮೆಂಟ್ ವಂದೇ ಭಾರತ್ ಎಕ್ಸ್‌ಪ್ರೆಸ್: ಹೊಸೂರು ನಿಲ್ದಾಣದಲ್ಲಿ (12:13/12:15 ಗಂಟೆ) ಪರಿಷ್ಕೃತ ಸಮಯವನ್ನು ಹೊಂದಿರುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !