ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಹಾರದಲ್ಲಿ ಎರಡೂ ಹಂತದ ಚುನಾವಣೆ ಮುಗಿದಿದ್ದು, ಇನ್ನೇನು ಫಲಿತಾಂಶ ಹೊರ ಬೀಳಬೇಕಾಗಿದೆ. ಇದೇ ಸಮಯದಲ್ಲಿ ಬಿಹಾರದ ವಿಡಿಯೋ ಒಂದು ವೈರಲ್ ಆಗಿದ್ದು, ವ್ಯಕ್ತಿಯೊಬ್ಬ ತನ್ನ ನೆಚ್ಚಿನ ರಾಜಕೀಯ ಪಕ್ಷಕ್ಕೆ ಮತ ಹಾಕಿಲ್ಲ ಎನ್ನುವ ಕಾರಣಕ್ಕೆ ಪತ್ನಿಗೆ ಥಳಿಸಿದ ಘಟನೆ ನಡೆದಿದೆ.
2025 ರ ಬಿಹಾರ ವಿಧಾನಸಭಾ ಚುನಾವಣೆಯ ಸಮಯದಲ್ಲಿ ರಾಷ್ಟ್ರೀಯ ಜನತಾ ದಳ (RJD) ಬದಲಿಗೆ ಭಾರತೀಯ ಜನತಾ ಪಕ್ಷ (BJP) ಗೆ ಮತ ಹಾಕಿದ್ದಾರೆ ಎಂಬ ಆರೋಪದ ಮೇಲೆ ಪತಿ ತನ್ನ ಹೆಂಡತಿಯ ಮೇಲೆ ಸಾರ್ವಜನಿಕವಾಗಿ ಹಲ್ಲೆ ಮಾಡುತ್ತಿರುವ ವೀಡಿಯೊವನ್ನು ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಮಹಿಳೆಯ ಗಂಡ ಆರ್‌ಜೆಡಿ ನಾಯಕನಾಗಿದ್ದು, ತನ್ನ ಪತ್ನಿಗೆ ಆರ್‌ಜೆಡಿಗೆ ಬೆಂಬಲಿಸಿ ಮತ ಹಾಕುವಂತೆ ಹೇಳಿದ್ದಾನೆ. ಆದರೆ ಹೆಂಡತಿ ತಾನು ಬಿಜೆಪಿಗೆ ಮತ ಹಾಕಿದ್ದೇನೆ ಎಂದು ಬಹಿರಂಗಪಡಿಸಿದಾಗ, ಆ ವ್ಯಕ್ತಿ ಆಕೆಯ ಮೇಲೆ ಹಲ್ಲೆ ಮಾಡಲು ಪ್ರಾರಂಭಿಸಿದನು.
ವೈರಲ್ ವಿಡಿಯೋದಲ್ಲಿ ಹೆಂಡತಿ ತನ್ನನ್ನು ತಾನು ರಕ್ಷಿಸಿಕೊಳ್ಳುತ್ತಿರುವುದನ್ನು ತೋರಿಸಲಾಗಿದೆ. ಇಬ್ಬರು ನೆರೆಹೊರೆಯವರು ಆಕೆಯ ರಕ್ಷಣೆಗೆ ಧಾವಿಸಿದ್ದಾರೆ. ವ್ಯಕ್ತಿಯೊಬ್ಬ ಆತನನ್ನು ಪ್ರಶ್ನಿಸಿದಾಗ, ಪತಿರಾಯ ನನ್ನ ಹೆಂಡತಿ ಆರ್‌ಜೆಡಿಗೆ ಬದಲಾಗಿ ಬಿಜೆಪಿಗೆ ಮತ ಹಾಕಿದ್ದಾಳೆ ಎಂದು ಹೇಳಿದ್ದಾನೆ.

