Tuesday, September 2, 2025

ಪವನ್‌ ಖೇರಾ ಬಳಿಯಿದೆ ಎರಡು ವೋಟರ್‌ ಐಡಿ: ಕಾಂಗ್ರೆಸ್ ‘ಹೈಡ್ರೋಜನ್‌ ಬಾಂಬ್‌’ ಗೆ ಬಿಜೆಪಿ ತಿರುಗೇಟು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಿಜೆಪಿ ಮತ ಕಳ್ಳತನ ಮೇಲೆ ಹೈಡ್ರೋಜನ್‌ ಬಾಂಬ್‌ ಹಾಕಲಾಗುವುದು ಎನ್ನುವ ಕಾಂಗ್ರೆಸ್ ಗೆ ಬಿಜೆಪಿಯೂ ಹೊಸ ಅಸ್ತ್ರ ಬಿಟ್ಟಿದೆ.

ಹಿರಿಯ ಕಾಂಗ್ರೆಸ್ ಮುಖಂಡ ಪವನ್ ಖೇರಾ ಬಳಿ ಎರಡು ವೋಟರ್ ಐಡಿಗಳಿವೆ ಎಂದು ಬಿಜೆಪಿ ಆರೋಪಿಸಿದೆ. ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ತಮ್ಮ ಸೋಷಿಯಲ್ ಮೀಡಿಯಾ ಪೋಸ್ಟ್​ನಲ್ಲಿ ವಿವರ ನೀಡಿದ್ದು, ಪವನ್ ಖೇರಾ ಹಲವು ಬಾರಿ ವೋಟು ಚಲಾಯಿಸಿದ್ದಾರಾ ಎಂಬುದು ತನಿಖೆಯಾಗಲಿ ಎಂದು ಆಗ್ರಹಿಸಿದ್ದಾರೆ.

http://Pawan Khera has two voter IDs: BJP hits back at Congress’ ‘hydrogen bomb’!

ಕಾಂಗ್ರೆಸ್ ವಕ್ತಾರರಾಗಿರುವ ಪವನ್ ಖೇರಾ ಅವರು ಜಂಗಪುರ ಮತ್ತು ನ್ಯೂ ಡೆಲ್ಲಿ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರತ್ಯೇಕ ವೋಟರ್ ಐಡಿ ಹೊಂದಿದ್ದಾರೆ ಎಂದು ಹೇಳಿರುವ ಅಮಿತ್ ಮಾಳವೀಯ, ಆ ಎರಡು ವೋಟರ್ ಐಡಿಗಳ ಎಪಿಕ್ ನಂಬರ್, ಪಾರ್ಟ್ ನಂಬರ್ ಇತ್ಯಾದಿ ಮಾಹಿತಿಯನ್ನು ಹಾಕಿದ್ದಾರೆ.

ಎರಡು ಸಕ್ರಿಯ ಎಪಿಕ್ ನಂಬರ್ ಹೊಂದಿರುವ ಪವನ್ ಖೇರಾ ಒಂದಕ್ಕಿಂತ ಹೆಚ್ಚು ಬಾರಿ ಮತ ಚಲಾಯಿಸಿದ್ದಾರಾ ಎಂಬುದನ್ನು ಚುನಾವಣಾ ಆಯೋಗ ತನಿಖೆ ನಡೆಸಬೇಕು ಎಂದು ಅಮಿತ್ ಮಾಳವೀಯ ಒತ್ತಾಯಿಸಿದ್ದಾರೆ.

‘ಸತ್ಯ ಬಹಳ ಸ್ಪಷ್ಟ ಇದೆ. ಕಾಂಗ್ರೆಸ್ ಪಕ್ಷ ಅಪ್ಪಟ ಮತ ಕಳ್ಳನೆನಿಸಿದೆ. ಅದೇ ಕೆಸರನ್ನು ಎಲ್ಲರಿಗೂ ಮೆತ್ತಲು ಹೊರಟಿದೆ. ಬಹಳ ದೀರ್ಘ ಕಾಲ ಅವರು ನಮ್ಮ ಚುನಾವಣಾ ವ್ಯವಸ್ಥೆಯನ್ನು ದುರ್ಬಲಗೊಳಿಸಿದ್ದಾರೆ. ಅಕ್ರಮ ನುಸುಳುಕೋರರು ಮತ್ತು ಭಾರತೀಯರೇತರಿಗೆ ಮಾನ್ಯತೆ ನೀಡಿ ಚುನಾವಣೆ ಗೆದ್ದಿದ್ದಾರೆ. ಚುನಾವಣಾ ಆಯೋಗವು ವಿಶೇಷ ಮತ ಪರಿಷ್ಕರಣೆ ಮಾಡುವುದರಿಂದ ತಮ್ಮ ಕುತಂತ್ರ ಬಯಲಾಗುವ ಭಯ ಕಾಂಗ್ರೆಸ್ಸಿಗರಿಗೆ ಶುರುವಾಗಿದೆ’ ಎಂದು ಕುಟುಕಿದ ಅಮಿತ್ ಮಾಳವೀಯ, ಭಾರತದ ಪ್ರಜಾತಂತ್ರ ವ್ಯವಸ್ಥೆಗೆ ರಾಹುಲ್ ಗಾಂಧಿ ಮಾರಕ ಎನ್ನುವ ಸತ್ಯವನ್ನು ದೇಶದ ಜನರು ಅರಿಯುವ ಸಮಯ ಬಂದಿದೆ ಎಂದಿದ್ಧಾರೆ.

ಪವನ್‌ ಖೇರಾ ಎರಡು ಕಡೆ ವೋಟರ್‌ ಐಡಿ ಹೊಂದಿದ್ದಾರೆ ಎಂದು ಆರೋಪಿಸಿ ಬಿಜೆಪಿ ದಾಖಲೆ ಬಿಡುಗಡೆ ಮಾಡಿ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದು, ಈ ಬೆನ್ನಲ್ಲೇ ಪವನ್ ಖೇರಾ ಅವರಿಗೆ ಚುನಾವಣಾ ಆಯೋಗ ನೋಟಿಸ್‌ ನೀಡಿ ಶಾಕ್‌ ನೀಡಿದೆ.

ಎರಡು ಕಡೆ ವೋಟರ್‌ ಐಡಿ ಹೊಂದಿರುವುದು 1950ರ ಜನಪ್ರತಿನಿಧಿ ಕಾಯ್ದೆಯ ಅಡಿ ಶಿಕ್ಷಾರ್ಹ ಅಪರಾಧ. ಈ ಸಂಬಂಧ ಸೆಪ್ಟೆಂಬರ್ 8 ರ ಸೋಮವಾರ ಬೆಳಿಗ್ಗೆ 11 ಗಂಟೆಯೊಳಗೆ ನೋಟಿಸ್‌ಗೆ ಉತ್ತರಿಸಬೇಕು ಮತ್ತು ಕಾಯ್ದೆಯಡಿ ನಿಮ್ಮ ವಿರುದ್ಧ ಕ್ರಮ ಯಾಕೆ ಕೈಗೊಳ್ಳಬಾರದು ಎಂಬುದನ್ನು ತಿಳಿಸಬೇಕು ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ