Wednesday, November 5, 2025

ಚಿತ್ತಾಪುರ ಪಥಸಂಚಲನ ಹಿನ್ನೆಲೆ ಸಂಘಟಕರ ಶಾಂತಿ ಸಭೆ: ಜಿಲ್ಲಾಡಳಿತದ ಕಚೇರಿಯಲ್ಲಿ ಬಿಗಿ ಭದ್ರತೆ

ಹೊಸದಿಗಂತ ವರದಿ ಕಲಬುರಗಿ:

ಜಿಲ್ಲೆಯ ಚಿತ್ತಾಪುರದಲ್ಲಿ ಆರೆಸ್ಸೆಸ್ ಪಥಸಂಚಲನಕ್ಕೆ ವಿಷಯಕ್ಕೆ ಸಂಬಂಧಿಸಿದಂತೆ,ಕಲಬುರಗಿ ವಿಭಾಗೀಯ ಹೈಕೋರ್ಟ್ ಪೀಠ 10 ಸಂಘಟಕರ ಶಾಂತಿ ಸಭೆಯನ್ನು ಅ.28ಕ್ಕೆ ಇಂದು ನಡೆಸುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದ ಬೆನ್ನಲ್ಲೇ, ಮಂಗಳವಾರ ಬೆಳಗ್ಗೆ ಜಿಲ್ಲಾಡಳಿತದ ಕಚೇರಿಯಲ್ಲಿ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.

ಕಲಬುರಗಿ ಸಿಟಿ ಎಸಿಪಿ ದಕ್ಷಿಣ ಉಪ ವಿಭಾಗದ ಎಸಿಪಿ ಶರಣಬಸಪ್ಪಾ ಸುಬೇದಾರ್ ನೇತೃತ್ವದಲ್ಲಿ ಹಿರಿಯ ಪೋಲಿಸ್ ಅಧಿಕಾರಿಗಳೊಂದಿಗೆ ಮೂವರು ಸಿಪಿಐ, ಎರಡು ಸಿಆರ್, 40ಕ್ಕೂ ಅಧಿಕ ಹೆಚ್ ಸಿ ಪಿ ಸಿ ಹಾಗೂ 10 ಸಿಬ್ಬಂದಿ ಸೇರಿದಂತೆ ಶಾಂತಿ ಸಭೆ ನಡೆಯಲಿರುವ ಜಿಲ್ಲಾಡಳಿತ ಕಚೇರಿಯಲ್ಲಿ ಬಿಗಿ ಪೋಲಿಸ್ ಬಂದೋಬಸ್ತ್ ಕೈಗೊಂಡ,ಭದ್ರತೆ ನಿಯೋಜನೆ ಮಾಡಲಾಗಿದೆ.

ಕಳೆದ ಅ.19ರಂದು ಚಿತ್ತಾಪುರ ಪಥಸಂಚಲನಕ್ಕೆ ಅನುಮತಿ ನಿರಾಕರಿಸಿದ ಹಿನ್ನೆಲೆಯಲ್ಲಿ,ಸ್ಥಳೀಯ ಆಡಳಿತದ ವಿರುದ್ಧ ಆರೆಸ್ಸೆಸ್ ಜಿಲ್ಲಾ ಸಂಘಚಾಲಕ ಅಶೋಕ್ ಪಾಟೀಲ್ ಹೈಕೋರ್ಟ್ ಮೊರೆ ಹೋಗಿ ಅರ್ಜಿ ಸಲ್ಲಿಸಿದ್ದರು. ಬಳಿಕ ಅ.24ರಂದು ಆರೆಸ್ಸೆಸ್ ಸೇರಿ ಅರ್ಜಿ ಸಲ್ಲಿ‌ಸಿದ ಹತ್ತು ಸಂಘಟನೆಗಳ ಆಯ್ದ ಪ್ರಮುಖರ ಒಳಗೊಂಡ ಶಾಂತಿ ಸಭೆ ನಡೆಸಿ,ಅ.30ರಂದು ಹೈಕೋರ್ಟ್ ಗೆ ವರದಿ ಸಲ್ಲಿಸುವಂತೆ ಕಲಬುರಗಿ ವಿಭಾಗೀಯ ಹೈಕೋರ್ಟ್ ಪೀಠ ಆದೇಶ ನೀಡಿತ್ತು.

error: Content is protected !!