ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಧಾನಿ ದೆಹಲಿಯಲ್ಲಿ ಭದ್ರತಾ ಆತಂಕ ತೀವ್ರಗೊಳ್ಳುತ್ತಿರುವ ನಡುವೆಯೇ, ಹಲವು ಜಿಲ್ಲಾ ನ್ಯಾಯಾಲಯಗಳು ಮತ್ತು ಸಿಆರ್‌ಪಿಎಫ್ ಶಾಲೆಗಳಿಗೆ ಬಾಂಬ್ ಬೆದರಿಕೆ ಕರೆಗಳು ಬಂದಿರುವುದು ಗಂಭೀರ ಸಂಚಲನ ಮೂಡಿಸಿದೆ.
ಸಾಕೇತ್, ಪಟಿಯಾಲ ಹೌಸ್, ತೀಸ್ ಹಜಾರಿ ಸೇರಿದಂತೆ ಪ್ರಮುಖ ಕೆಳ ನ್ಯಾಯಾಲಯಗಳಿಗೆ ಕರೆ ಬಂದ ತಕ್ಷಣವೇ ವಕೀಲರು ಮತ್ತು ಸಾರ್ವಜನಿಕರನ್ನು ತುರ್ತಾಗಿ ಹೊರಗೆ ಕಳುಹಿಸಲಾಗಿದ್ದು, ಬಾಂಬ್ ನಿಷ್ಕ್ರಿಯ ದಳ, ಶ್ವಾನ ದಳ ಹಾಗೂ ವಿಧ್ವಂಸಕ ವಿರೋಧಿ ಘಟಕಗಳು ಸ್ಥಳಕ್ಕೆ ದೌಡಾಯಿಸಿ ತಪಾಸಣೆ ಪ್ರಾರಂಭಿಸಿವೆ. ಎಲ್ಲಾ ನ್ಯಾಯಾಲಯಗಳ ಸುತ್ತಮುತ್ತ ಹೆಚ್ಚುವರಿ ಪೊಲೀಸ್ ಬೀಗ ಕಟ್ಟಲಾಗಿದೆ.
ಇದೇ ವೇಳೆ, ದ್ವಾರಕಾ ಹಾಗೂ ಪ್ರಶಾಂತ್ ವಿಹಾರ್‌ನಲ್ಲಿರುವ ಎರಡು ಸಿಆರ್‌ಪಿಎಫ್ ಶಾಲೆಗಳಿಗೂ ಬೆದರಿಕೆ ಕರೆ ಬಂದ ಹಿನ್ನೆಲೆಯಲ್ಲಿ, ಕ್ಯಾಂಪಸ್‌ಗಳಲ್ಲಿ ಕಠಿಣ ತಪಾಸಣೆ ನಡೆಸಲಾಗಿದೆ. ವಿದ್ಯಾರ್ಥಿಗಳ ಸುರಕ್ಷತೆಗಾಗಿ ತುರ್ತು ಕ್ರಮಗಳನ್ನು ಕೈಗೊಳ್ಳಲಾಗಿದೆ.
ಈ ಬೆದರಿಕೆ ಕರೆಗಳು ಒಂದೇ ಮೂಲದಿಂದ ಬಂದಿವೆಯೇ ಎಂಬುದರ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದು, ಹಿನ್ನೆಲೆಯಲ್ಲಿ ನವೆಂಬರ್ 10ರಂದು ಕೆಂಪುಕೋಟೆ ಹತ್ತಿರ ನಡೆದ ಕಾರ್ ಬಾಂಬ್ ಸ್ಫೋಟದ ತನಿಖೆಯೂ ಬಿಗಿಯಾಗಿಸಿದೆ.

