January22, 2026
Thursday, January 22, 2026
spot_img

ʼಆಳಂದದಲ್ಲಿ ಮತಗಳ್ಳತನಕ್ಕೆ ಬಿಹಾರ, ಜಾರ್ಖಂಡ್, ದೆಹಲಿ ರಾಜ್ಯಗಳ ಫೋನ್ ನಂಬರ್‌ ಬಳಕೆʼ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕಲಬುರಗಿಯ ಆಳಂದ ಕ್ಷೇತ್ರದಲ್ಲಿ ಮತಗಳ್ಳತನಕ್ಕೆ ಬೇರೆ ಬೇರೆ ರಾಜ್ಯಗಳ ಮೊಬೈಲ್‌ ನಂಬರ್‌ ಬಳಕೆ ಮಾಡಿರೋದು ಹಾಗೂ ಬೆಳಗ್ಗಿನ ಜಾವ ವೋಟ್‌ ಡಿಲೀಟ್‌ ಮಾಡಿಸುತ್ತಿದ್ರು ಅನ್ನೋದು ಎಸ್‌ಐಟಿ ತನಿಖೆಯಿಂದ ಬೆಳಕಿಗೆ ಬಂದಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್‌ ಹೊಸ ಬಾಂಬ್‌ ಸಿಡಿಸಿದರು.

ಕೆಪಿಸಿಸಿ ಭಾರತ್ ಜೋಡೋ ಭವನದಲ್ಲಿ ಸಿಎಂ, ಡಿಸಿಎಂ ಜಂಟಿ ಸುದ್ದಿಗೋಷ್ಠಿಯಲ್ಲಿ, ವೋಟ್ ಚೋರಿ ಅಭಿಯಾನದ ಬಗ್ಗೆ ಸಹಿ ಸಂಗ್ರಹ ಕುರಿತು ಮಾತನಾಡಿದರು. ವೋಟ್‌ ಚೋರಿ ಬಗ್ಗೆ ದೇಶದೆಲ್ಲೆಡೆ ಅಭಿಯಾನ ಆಗ್ತಿದೆ. ಕರ್ನಾಟಕದಲ್ಲೂ ಆಗ್ತಿದೆ. ಕರ್ನಾಟಕದ ಮಹದೇವಪುರ ಕ್ಷೇತ್ರದಲ್ಲಿ ಮತಗಳ್ಳತನ ಆಗಿತ್ತು. ಅದನ್ನ ಕಾಂಗ್ರೆಸ್‌ ಬೆಳಕಿಗೆ ತಂದಿತ್ತು.

ಅದೇ ರೀತಿ ಗಾಂಧಿನಗರ, ಆಳಂದ ಕ್ಷೇತ್ರದಲ್ಲೂ ಮತಗಳ್ಳತನ ಆಗಿದೆ. ರಾಹುಲ್‌ ಗಾಂಧಿ ಅವರು ಇದನ್ನ ಬಯಲಿಗೆಳೆದು ದೇಶದ ಗಮನ ಸೆಳೆದರು. ಈಗ ಆಳಂದದಲ್ಲಿ ಬೆಳಗಿನ ಜಾವ ವೋಟ್ ಡಿಲೀಟ್ ಮಾಡಿಸುತ್ತಿದ್ದದ್ದು, ಜೊತೆಗೆ ಬೇರೆ ಬೇರೆ ರಾಜ್ಯಗಳ ಫೋನ್ ನಂಬರ್ ಬಳಸಿ ಮತಗಳ್ಳತನಕ್ಕೆ ಯತ್ನಿಸಿರುವುದು ಎಲ್ಲವೂ ಎಸ್‌ಐಟಿ ತನಿಖೆಯಿಂದ ಬೆಳಕಿಗೆ ಬಂದಿದೆ ಎಂದು ಮಾಹಿತಿ ನೀಡಿದರು.

Must Read