ಹೊಸದಿಗಂತ ಡಿಜಿಟಲ್ ಡೆಸ್ಕ್:
ಫೆ.14ರಿಂದ ಬೆಂಗಳೂರಿನಲ್ಲಿ ಮಹಿಳಾ ಪ್ರಯಾಣಿಕರ ಸೇಫ್ಟಿ ಹಾಗೂ ಸಬಲೀಕರಣಕ್ಕಾಗಿ ವಿನೂತನ ಪ್ರಯತ್ನವಾದ ಸಖಿ ಆಟೋ ಸೇವೆ ಶೀಘ್ರದಲ್ಲೇ ಆರಂಭವಾಗಲಿದೆ.
ಮಹಿಳೆಯರಿಗಾಗಿ ಮಹಿಳಾ ಚಾಲಕಿಯರೇ ನಡೆಸುವ ವಿಶೇಷ ಸಾರಿಗೆ ವ್ಯವಸ್ಥೆ ಇದಾಗಿದೆ. ಬೆಳಗ್ಗೆ ಆರು ಗಂಟೆಯಿಂದ ಮಧ್ಯರಾತ್ರಿ 12 ಗಂಟೆವರೆಗೆ ಈ ಸೇವೆ ಲಭ್ಯವಿರಲಿದೆ.
ಈ ಸಖಿಯಲ್ಲಿ ಹೆಚ್ಚಿನ ದಟ್ಟಣೆಯ ಸಮಯದಲ್ಲಿ ದರ ಏರಿಕೆಯಾಗುವುದಿಲ್ಲ. ಭವಿಷ್ಯದಲ್ಲಿ ಟ್ರಾನ್ಸ್ ಮಹಿಳೆಯರನ್ನು ಕೂಡ ಚಾಲಕಿಯರನ್ನಾಗಿ ನೇಮಿಸಿಕೊಳ್ಳಲಾಗುವುದು.
ಈಗಾಗಲೇ 21 ರಿಂದ 40 ವರ್ಷದ ಸುಮಾರು 50 ನುರಿತ ಮಹಿಳಾ ಚಾಲಕಿಯರು ಈ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ಬೆಂಗಳೂರಿನ ಮಹಿಳೆಯರಿಗೆ ಇದು ಹೆಚ್ಚು ಸುರಕ್ಷಿತ ಮತ್ತು ಆರಾಮದಾಯಕ ಪ್ರಯಾಣದ ಆಯ್ಕೆಯಾಗಲಿದೆ.



