February 2, 2026
Monday, February 2, 2026
spot_img

ಪೈಪ್‌ಲೈನ್ ಕಾಮಗಾರಿ: ಸಿಲಿಕಾನ್ ಸಿಟಿಯ ಈ ಭಾಗಗಳಲ್ಲಿ ಫೆ. 5 ರಿಂದ ನಲ್ಲಿಯಲ್ಲಿ ನೀರು ಬರಲ್ಲ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರು ನಗರದ ನಿವಾಸಿಗಳೇ ಗಮನಿಸಿ, ನಗರದ ಪ್ರಮುಖ ಪೈಪ್‌ಲೈನ್‌ಗಳ ತುರ್ತು ನಿರ್ವಹಣೆ ಮತ್ತು ಹೊಸ ಪೈಪ್‌ಲೈನ್ ಅಳವಡಿಕೆ ಕಾಮಗಾರಿಯಿಂದಾಗಿ ಫೆಬ್ರವರಿ 5 ಬೆಳಗ್ಗೆ 6 ರಿಂದ ಫೆಬ್ರವರಿ 6 ಬೆಳಗ್ಗೆ 6 ಗಂಟೆಯವರೆಗೆ ನಗರದ ವಿವಿಧೆಡೆ ಕಾವೇರಿ ನೀರಿನ ಪೂರೈಕೆಯಲ್ಲಿ ಸಂಪೂರ್ಣ ವ್ಯತ್ಯಯವಾಗಲಿದೆ.

ಜಲಮಂಡಳಿ ಅಧ್ಯಕ್ಷರಾದ ಡಾ. ವಿ. ರಾಮ್‌ ಪ್ರಸಾತ್‌ ಮನೋಹರ್‌ ಅವರು ಈ ಕುರಿತು ಮಾಹಿತಿ ನೀಡಿದ್ದು, 1200mm, 900mm ಹಾಗೂ 700mm ವ್ಯಾಸದ ಪೈಪ್‌ಲೈನ್ ಕಾಮಗಾರಿಗಳಿಗಾಗಿ ಕಾವೇರಿ 1 ಮತ್ತು 2ನೇ ಹಂತದ ಜಲರೇಚಕ ಯಂತ್ರಗಳನ್ನು 24 ಗಂಟೆಗಳ ಕಾಲ ಸ್ಥಗಿತಗೊಳಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಕೆಳಕಂಡ ಬಡಾವಣೆಗಳ ನಿವಾಸಿಗಳು ಮುನ್ನೆಚ್ಚರಿಕೆಯಾಗಿ ನೀರನ್ನು ಸಂಗ್ರಹಿಸಿಟ್ಟುಕೊಳ್ಳಲು ಕೋರಲಾಗಿದೆ:

ಬನಶಂಕರಿ (ಎಲ್ಲಾ ಹಂತಗಳು), ಪದ್ಮನಾಭ ನಗರ, ಕುಮಾರಸ್ವಾಮಿ ಲೇಔಟ್, ಉತ್ತರಹಳ್ಳಿ, ಇಸ್ರೋ ಲೇಔಟ್, ಪೂರ್ಣಪ್ರಜ್ಞಾ ಬಡಾವಣೆ, ಜೆ.ಪಿ. ನಗರ 1, 2 ಮತ್ತು 3ನೇ ಹಂತ, ಹೊಸಕೆರೆಹಳ್ಳಿ, ಶ್ರೀನಗರ, ಹನುಮಗಿರಿ ನಗರ.

ಜಯನಗರ (4, 5, 6, 7, 8 ಮತ್ತು 9ನೇ ಬ್ಲಾಕ್), ವಿಲ್ಸನ್ ಗಾರ್ಡನ್, ಶಾಂತಿನಗರ, ಅಶೋಕ ನಗರ, ರಿಚ್‌ಮಂಡ್ ಟೌನ್, ಎಂ.ಜಿ. ರಸ್ತೆ, ನೀಲಸಂದ್ರ, ಆಡುಗೋಡಿ, ಕೋರಮಂಗಲ (2 ರಿಂದ 8ನೇ ಬ್ಲಾಕ್‌ವರೆಗೆ).

ಮಾಗಡಿ ರಸ್ತೆ, ಚಾಮರಾಜಪೇಟೆ, ಜಗಜೀವನರಾಮನಗರ, ಮಾವಳ್ಳಿ, ಶಂಕರಪುರಂ, ಕೆಂಪೇಗೌಡ ನಗರ.

ಮಡಿವಾಳ, ಈಜಿಪುರ, ದೊಮ್ಮಲೂರು, ಕೋಡಿಹಳ್ಳಿ, ವಿವೇಕ್ ನಗರ, ಸೆಂಟ್‌ ಜಾನ್‌ ಮತ್ತು ನಿಮಾನ್ಸ್ ಆಸ್ಪತ್ರೆ ಆವರಣಗಳು, ಲಕ್ಕಸಂದ್ರ ಮತ್ತು ಸುತ್ತಮುತ್ತಲ ಪ್ರದೇಶಗಳು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !