January16, 2026
Friday, January 16, 2026
spot_img

Plants | ಮನೆಗೆ ಹಸಿರು ಸೌಂದರ್ಯ ನೀಡುವುದರ ಜೊತೆಗೆ ಸೊಳ್ಳೆಗಳಿಂದಲೂ ರಕ್ಷಿಸುತ್ತವೆ ಈ ಗಿಡಗಳು!

ಸೊಳ್ಳೆಗಳಿಂದ ರಕ್ಷಿಸಲು ಮಾರುಕಟ್ಟೆಯಲ್ಲಿ ಸೊಳ್ಳೆ ಬತ್ತಿ, ಸೊಳ್ಳೆ ನಿವಾರಕ ಸ್ಪ್ರೇಗಳು ಸಿಕ್ಕರೂ, ಇವುಗಳಲ್ಲಿರುವ ರಾಸಾಯನಿಕ ಅಂಶಗಳು ಆರೋಗ್ಯಕ್ಕೆ ಹಾನಿಕಾರಕವಾಗಬಹುದು. ಆದರೆ, ಪ್ರಕೃತಿಯಲ್ಲೇ ಸೊಳ್ಳೆ ನಿವಾರಣೆಗೆ ಪರಿಹಾರಗಳಿವೆ. ಕೆಲವು ವಿಶಿಷ್ಟ ಸಸ್ಯಗಳು ಮನೆಗೆ ಹಸಿರು ಸೌಂದರ್ಯ ನೀಡುವುದರ ಜೊತೆಗೆ ಸೊಳ್ಳೆಗಳನ್ನು ಹಿಮ್ಮೆಟ್ಟಿಸುವ ಸಹಜ ಶಕ್ತಿ ಹೊಂದಿವೆ. ಇಲ್ಲಿವೆ ಅಂತಹ ಕೆಲವು ಸಸ್ಯಗಳು.

  • ರೋಸ್ಮರಿ : ರೋಸ್ಮರಿ ಸೊಳ್ಳೆಗಳನ್ನು ದೂರವಿಡಲು ಅತ್ಯುತ್ತಮ ಸಸ್ಯ. ಇದು ಸೊಳ್ಳೆಗಳಷ್ಟೇ ಅಲ್ಲ, ಇತರ ಕೀಟಗಳಿಂದಲೂ ರಕ್ಷಣೆ ನೀಡುತ್ತದೆ. ಸಣ್ಣ ಕುಂಡಗಳಲ್ಲಿ ಒಳಾಂಗಣ ಅಥವಾ ಬಾಗಿಲ ಹತ್ತಿರ ಬೆಳೆಸಬಹುದು. ಇದರ ಹಸಿರು ಎಲೆಗಳಿಂದ ಬರುವ ವಾಸನೆ ಸೊಳ್ಳೆಗಳಿಗೆ ಅಸಹನೀಯ.
  • ಮಾರಿಗೋಲ್ಡ್ (ಗೊಂಡೆ ಹೂವು): ಮಾರಿಗೋಲ್ಡ್ ಗಿಡಗಳು ಮನೆಯನ್ನು ಇನ್ನು ಸುಂದರವಾಗಿ ಕಾಣುವಂತೆ ಮಾಡುತ್ತವೆ. ಇವುಗಳ ವರ್ಣರಂಜಿತ ಹೂಗಳನ್ನು ನೀಡುವುದರ ಜೊತೆಗೆ ಸೊಳ್ಳೆ ಮತ್ತು ಕೀಟ ನಿವಾರಣೆಯಲ್ಲೂ ಸಹಾಯಕ. ಇವು ಸಣ್ಣ ಮಡಕೆಗಳಲ್ಲಿ ಕಿಟಕಿಯ ಬಳಿ ಅಥವಾ ಬಾಗಿಲಿನ ಹತ್ತಿರ ಇಟ್ಟರೆ ಉತ್ತಮ ಪರಿಣಾಮ ನೀಡುತ್ತವೆ.
  • ತುಳಸಿ: ತುಳಸಿ ಪ್ರತಿಯೊಂದು ಭಾರತೀಯ ಮನೆಯ ಪವಿತ್ರ ಸಸ್ಯ. ಇದರ ತೀಕ್ಷ್ಣ ವಾಸನೆ ಸೊಳ್ಳೆಗಳ ಲಾರ್ವಾಗಳನ್ನು ನಾಶಪಡಿಸಲು ಸಹಾಯಕ. ತುಳಸಿ ಗಿಡವನ್ನು ಮನೆಯಲ್ಲಿ ಬೆಳೆಸುವುದರಿಂದ ವಾತಾವರಣವೂ ಶುದ್ಧವಾಗುತ್ತದೆ.
  • ನಿಂಬೆ ಹುಲ್ಲು (Lemongrass): ನಿಂಬೆ ಹುಲ್ಲು ಸೊಳ್ಳೆ ನಿವಾರಕ ಪರಿಮಳವನ್ನು ಹೊಂದಿದೆ. ಇದರ ವಾಸನೆ ಸೊಳ್ಳೆಗಳನ್ನು ಹತ್ತಿರ ಬರದಂತೆ ತಡೆಯುತ್ತದೆ. ಕುಂಡಗಳಲ್ಲಿ ಅಥವಾ ತೋಟದ ಅಂಚಿನಲ್ಲಿ ಬೆಳೆಯಲು ಇದು ಸೂಕ್ತ.
  • ಪುದೀನ: ಪುದೀನ ಸಸ್ಯದ ತಾಜಾ ವಾಸನೆ ಸೊಳ್ಳೆಗಳನ್ನು ಮನೆಯೊಳಗೇ ಬಾರದಂತೆ ತಡೆಯುತ್ತದೆ. ಮನೆಯ ಒಳಾಂಗಣದಲ್ಲಿ ಅಥವಾ ಕಿಟಕಿಯ ಹತ್ತಿರ ಬೆಳೆಸಿದರೆ ಉತ್ತಮ ಫಲಿತಾಂಶ ನೀಡುತ್ತದೆ.(Disclaimer: ಈ ಲೇಖನವು ಅಂತರ್ಜಾಲ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ.)

Must Read

error: Content is protected !!