Wednesday, November 26, 2025

ಬಾಸ್ಕೆಟ್‌ ಬಾಲ್‌ ಪ್ರಾಕ್ಟೀಸ್‌ ವೇಳೆ ಕಬ್ಬಿಣದ ಕಂಬ ಬಿದ್ದು ಆಟಗಾರ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬಾಸ್ಕೆಟ್ ಬಾಲ್ ಅಭ್ಯಾಸದ ವೇಳೆ ಆಟಗಾರನ ಮೇಲೆ ಕಬ್ಬಿಣದ ಕಂಬ ಬಿದ್ದು ಆತ ಮೃತಪಟ್ಟಿರುವ ಘಟನೆ ಹರಿಯಾಣದ ರೋಹ್ಟಕ್​ನಲ್ಲಿ ನಡೆದಿದೆ.

ಘಟನೆಯ ನಂತರ, ಆಟಗಾರನ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ಕರೆದೊಯ್ಯಲಾಯಿತು ಆದರೆ ಚಿಕಿತ್ಸೆಯ ಸಮಯದಲ್ಲಿ ಸಾವನ್ನಪ್ಪಿದ್ದಾನೆ ಎನ್ನುವ ಮಾಹಿತಿ ಲಭ್ಯವಾಗಿದೆ. ಲಖನ್ ಮಜ್ರಾ ಗ್ರಾಮದ ಕ್ರೀಡಾ ಮೈದಾನದಲ್ಲಿ ಬೆಳಗ್ಗೆ 10 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಆಟಗಾರ ಬ್ಯಾಸ್ಕೆಟ್‌ಬಾಲ್ ಕೋರ್ಟ್​ನಲ್ಲಿ ಒಬ್ಬನೇ ಅಭ್ಯಾಸ ಮಾಡುತ್ತಿದ್ದಾಗ ಅಪಘಾತದ ಸಂಭವಿಸಿದ್ದು ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

error: Content is protected !!