ಹೊಸ ದಿಗಂತ ಡಿಜಿಟಲ್ ಡೆಸ್ಕ್:
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಭಗವದ್ಗೀತೆಯ ಪ್ರತಿಯನ್ನು ಗಿಫ್ಟ್ ನೀಡಿದ್ದು, ಈ ಕ್ಷಣವನ್ನು ಬಿಜೆಪಿ ಸಂಸದೆ ಕಂಗನಾ ರನೌತ್, ಗೀತೆ ಸಾರ್ವತ್ರಿಕ ಸತ್ಯದ ಪರಂಪರೆಯನ್ನು ಪ್ರತಿನಿಧಿಸುತ್ತದೆ ಮತ್ತು ಪ್ರಧಾನಿ ಮೋದಿ ಸನಾತನ ಧರ್ಮ ಮತ್ತು ಭಾರತೀಯ ಸಂಸ್ಕೃತಿಯ ರಾಯಭಾರಿ ಎಂದು ಶುಕ್ರವಾರ ಹೇಳಿದ್ದಾರೆ.
ಗೀತೆ ಸಾರ್ವತ್ರಿಕ ಸತ್ಯದ ಪರಂಪರೆಯಾಗಿದೆ. ನಮ್ಮ ಪ್ರಧಾನಿ ಸನಾತನ ಧರ್ಮ ಮತ್ತು ಭಾರತೀಯ ಸಂಸ್ಕೃತಿಯ ರಾಯಭಾರಿ. ಗೀತೆಯಲ್ಲಿರುವ ಸತ್ಯವು ಯಾವಾಗಲೂ ನಮಗೆ ಸ್ಫೂರ್ತಿ ನೀಡುತ್ತದೆ. ಧರ್ಮಗ್ರಂಥಗಳು ಕರ್ಮ, ಭಾವನೆಗಳು ಮತ್ತು ಕುಟುಂಬದ ಬಗ್ಗೆ ಆಳವಾದ ಬೋಧನೆಗಳನ್ನು ಹೊಂದಿವೆ. ಅಧ್ಯಕ್ಷ ಪುಟಿನ್ ಈ ಗೀತೆಯನ್ನು ಓದಿದರೆ, ಭಾರತ, ನಮ್ಮ ಮಣ್ಣು ಮತ್ತು ನಮ್ಮ ಜನರೊಂದಿಗಿನ ಅವರ ಬಾಂಧವ್ಯ ಇನ್ನಷ್ಟು ಬಲಗೊಳ್ಳುತ್ತದೆ ಎಂದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿ ಸಂಸದ ಮನೋಜ್ ತಿವಾರಿ ಅವರು, ;ನರೇಂದ್ರ ಮೋದಿ ಈ ದೇಶದ ಸಂಸ್ಕೃತಿಗೆ ಆಶೀರ್ವಾದವಾಗಿ ಬಂದಿದ್ದಾರೆ. ತಮ್ಮ ಕರ್ತವ್ಯಗಳನ್ನು ನಿರ್ವಹಿಸುವವರು ಮಾತ್ರ ಮುಂದುವರಿಯಬೇಕು – ಫಲಿತಾಂಶದ ಬಗ್ಗೆ ಚಿಂತಿಸದೆ ತಮ್ಮ ಕರ್ತವ್ಯವನ್ನು ಮಾಡಬೇಕು ಮತ್ತು ಯಾವಾಗಲೂ ನೀತಿವಂತರಾಗಿ ವರ್ತಿಸಬೇಕು ಎಂದು ಗೀತೆ ಕಲಿಸುತ್ತದೆ. ಅವರು ಈ ಸಂದೇಶವನ್ನು ಸಾರುತ್ತಿದ್ದರೆ. ಅದು ಅರ್ಥಪೂರ್ಣ ಮತ್ತು ಪ್ರಸ್ತುತವಾಗಿದೆ” ಎಂದರು.

