April 9, 2026
Thursday, April 9, 2026
spot_img

ಇಂದಿನಿಂದ ಎರಡು ದಿನಗಳ ಇಸ್ರೇಲ್‌ ಪ್ರವಾಸ ಆರಂಭಿಸಿದ ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಬುಧವಾರದಿಂದ ಎರಡು ದಿನಗಳ ಇಸ್ರೇಲ್ ಭೇಟಿಯಲ್ಲಿರುತ್ತಾರೆ. ಇಸ್ರೇಲ್ ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು ಅವರು ಮೊನ್ನೆ ಫೆಬ್ರವರಿ 15ರಂದು ಜೆರುಸಲೇಮ್‌ನಲ್ಲಿ ನಡೆದ ಪ್ರಮುಖ ಅಮೆರಿಕನ್ ಯಹೂದಿ ಸಂಘಟನೆಗಳ ಅಧ್ಯಕ್ಷರ ಸಮ್ಮೇಳನದಲ್ಲಿ ಮಾತನಾಡುವ ವೇಳೆ ಈ ಭೇಟಿಯ ಬಗ್ಗೆ ಮಾಹಿತಿ ನೀಡಿದ್ದರು.

ಇಂದು ಮತ್ತು ನಾಳೆ ಕಾರ್ಯಕ್ರಮಗಳಲ್ಲಿ ಇಬ್ಬರು ನಾಯಕರು ಒಟ್ಟಿಗೆ ಭಾಗವಹಿಸಲಿದ್ದಾರೆ. 2017ರ ಜುಲೈನಲ್ಲಿ ನಡೆದ ಹಿಂದಿನ ಭೇಟಿಯಂತೆ, ತೆಲ್ ಅವೀವ್ ವಿಮಾನ ನಿಲ್ದಾಣದಲ್ಲಿ ನೆತನ್ಯಾಹು ಅವರು ಪ್ರಧಾನಿ ಮೋದಿಯನ್ನು ಸ್ವಾಗತಿಸಲಿದ್ದಾರೆ. ನಂತರ ಇಬ್ಬರು ಜೆರುಸಲೆಮ್‌ಗೆ ಒಟ್ಟಿಗೆ ಪ್ರಯಾಣಿಸುವ ನಿರೀಕ್ಷೆಯಿದೆ.

ನಾಳೆ ದ್ವಿಪಕ್ಷೀಯ ಮಾತುಕತೆ ಮತ್ತು ಜಂಟಿ ಪತ್ರಿಕಾಗೋಷ್ಠಿ ನಡೆಯಲಿದೆ. ಅದಲ್ಲದೆ, ಪ್ರಧಾನಿ ಮೋದಿ ಇಸ್ರೇಲ್ ಸಂಸತ್ತಾದ ಕ್ನೆಸೆಟ್‌ನಲ್ಲಿ ಭಾಷಣ ಮಾಡಲಿದ್ದು, ಖಾಸಗಿ ಭೋಜನ, ನವೋತ್ಪಾದನಾ ಕಾರ್ಯಕ್ರಮ, ಯಾದ್ ವಶೆಮ್ ಹೋಲೋಕಾಸ್ಟ್ ಸ್ಮಾರಕ ಸಂಗ್ರಹಾಲಯಕ್ಕೆ ಭೇಟಿ ಹಾಗೂ ಇಸ್ರೇಲ್‌ನಲ್ಲಿ ನೆಲೆಸಿರುವ ಭಾರತೀಯ-ಯಹೂದಿ ಸಮುದಾಯದೊಂದಿಗೆ ಸಂವಾದ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸಾಧ್ಯತೆ ಇದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !