Wednesday, December 10, 2025

ಪ್ರಧಾನಿ ಮೋದಿ ಇವಿಎಂ ಹ್ಯಾಕ್​ ಮಾಡಿಲ್ಲ, ಜನರ ಹೃದಯವನ್ನು ಹ್ಯಾಕ್​ ಮಾಡಿದ್ದಾರೆ: ಸಂಸದೆ ಕಂಗನಾ

ಹೊಸದಿಗಂತ ಡಿಜಿಟಲ್ ಡೆಸ್ಕ್;

ಪ್ರಧಾನಿ ನರೇಂದ್ರ ಮೋದಿ ಚುನಾವಣೆಯಲ್ಲಿ ಗೆಲುವಿಗಾಗಿ ಮತದಾನ ವ್ಯವಸ್ಥೆಯನ್ನು ತಿರುಚಬೇಕಾಗಿಲ್ಲ. ಕಾರಣ ಅವರು ಜನರ ಹೃದಯವನ್ನೇ ಹ್ಯಾಕ್​ ಮಾಡಿದ್ದಾರೆ ಎಂದು ಲೋಕಸಭೆಯಲ್ಲಿ ಬಿಜೆಪಿ ಸಂಸದೆ ಕಂಗನಾ ರನೌತ್​ ತಿಳಿಸಿದರು.

ಚುನಾವಣಾ ಸುಧಾರಣಾ ಚರ್ಚೆ ವೇಳೆ ಭಾಗಿಯಾಗಿ ಮಾತನಾಡಿದ ಅವರು, ವಿರೋಧ ಪಕ್ಷದ ಸದಸ್ಯರು ದಿನನಿತ್ಯ ಕಲಾಪಕ್ಕೆ ಅಡ್ಡಿಪಡಿಸುತ್ತಿದ್ದು, ಕಳೆದ ಬಾರಿ ಸದನ ಕೂಡ ಗದ್ದಲದಲ್ಲೇ ಮುಗಿದು ಹೋಗಿತ್ತು. ಅವರು ಪದೆ ಪದೇ ಸದನಕ್ಕೆ ಅಡ್ಡಿ ಪಡಿಸುವುದನ್ನು ನೋಡಿದರೆ ಆಘಾತಕಾರಿ ಎನಿಸುತ್ತದೆ. ಅವರು ಪದೇ ಪದೆ ಸದನದ ಬಾವಿಗಿಳಿದು ಎಸ್​ಐಆರ್​ ಎಂದು ಕೂಗುವ ಮೂಲಕ ಬೆದರಿಸಲು ಪ್ರಯತ್ನಿಸುತ್ತಿದ್ದಾರೆ. ಅವರು ಸಾಧ್ಯವಿರುವ ಎಲ್ಲಾ ರೀತಿಯ ಅನುಚಿತ ವರ್ತನೆ ತೋರುತ್ತಿದ್ದಾರೆ. ಅವರು ಪ್ರತಿಭಟನೆ ಮಾಡುವ ಮೂಲಕ ಕಾರ್ಯಾಚರಣೆಗೆ ಅಡ್ಡಿ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಇವಿಎಂ ತಿರುಚಲಾಗಿದೆ ಎಂಬ ಹೇಳಿಕೆ ಕುರಿತು ಮಾತನಾಡಿದ ಕಂಗನಾ, ಕಾಂಗ್ರೆಸ್​ ನಾಯಕರು ಸೋಲನ್ನು ಒಪ್ಪಿಕೊಳ್ಳಲು ಸಿದ್ಧರಾಗಿಲ್ಲ. ಕಾಂಗ್ರೆಸ್ ನಾಯಕರಿಗೆ​ ಹೇಳಬಯಸುವುದೆಂದರೆ, ಪ್ರಧಾನಿ ಇವಿಎಂ ಹ್ಯಾಕ್​ ಮಾಡಿಲ್ಲ, ಜನರ ಹೃದಯವನ್ನು ಹ್ಯಾಕ್​ ಮಾಡಿದ್ದಾರೆ ಎಂದು ಹೇಳಿದರು.

ಪೇಪರ್​ ಬ್ಯಾಲೆಟ್​ ವ್ಯವಸ್ಥೆ ಮರಳಬೇಕು ಎಂಬುದನ್ನು ಟೀಕಿಸಿದ ಅವರು, ಅದೊಂದು ಹಳೆ ಯುಗದ ಅವಶೇಷ ಎಂದು ಕರೆದರು.

ರಾಹುಲ್​ ಗಾಂಧಿ ವಿರುದ್ಧ ಟೀಕಿಸಿ ಮಾತನಾಡಿದ ಸಂಸದೆ, ವರ್ಷವಿಡೀ ಅದೇ ಆರೋಪಗಳನ್ನು ಕೇಳಿದ ನಂತರ ಇದೀಗ ದೊಡ್ಡದಾದ ಅಂಶವನ್ನು ನಿರೀಕ್ಷಿಸುತ್ತಿದ್ದೇನೆ. ಆದರೆ, ಅವರು ಮಾತ್ರ ಖಾದಿ, ದಾರ ಮತ್ತು ರೂಪಕಗಳ ಬಗ್ಗೆ ಮಾತನಾಡುತ್ತಿದ್ದಾರೆ ಎಂದರು.

error: Content is protected !!