ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ಕ್ರಿಕೆಟ್ ತಾರೆ ಸ್ಮೃತಿ ಮಂಧಾನ ಹಾಗೂ ಸಂಗೀತ ಸಂಯೋಜಕ ಪಲಾಶ್ ಮುಚ್ಚಲ್ ನವೆಂಬರ್ 23ರಂದು ವಿವಾಹ ಬಾಂಧವ್ಯಕ್ಕೆ ಕಾಲಿಡಲಿದ್ದಾರೆ. ಈ ವಿಶೇಷ ಸಂದರ್ಭದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ದಂಪತಿಗೆ ಹಾಗೂ ಅವರ ಕುಟುಂಬಗಳಿಗೆ ಶುಭ ಹಾರೈಕೆಗಳನ್ನು ತಿಳಿಸಿದ್ದಾರೆ.
ಪ್ರಧಾನಮಂತ್ರಿಗಳ ಕಚೇರಿಯಿಂದ ಬಿಡುಗಡೆಯಾದ ಪತ್ರದಲ್ಲಿ, ಸ್ಮೃತಿ ಮತ್ತು ಪಲಾಶ್ ಮದುವೆಯಾಗುತ್ತಿರುವ ಸುದ್ದಿ ಆನಂದಕಾರಿ. ಇವರಿಬ್ಬರ ಕುಟುಂಬಗಳಿಗೆ ಹಾರ್ದಿಕ ಅಭಿನಂದನೆಗಳು. ನಿಮ್ಮ ಜೀವನದ ಪ್ರತಿಯೊಂದು ಋತುವಿನಲ್ಲೂ ಪರಸ್ಪರ ಕೈಹಿಡಿದು ನಡೆಯಿರಿ. ಮನಸ್ಸು–ಮಾತುಒಂದಾಗಿರಲಿ, ಕನಸುಗಳು ಒಂದಾಗಲಿ,” ಎಂದು ಬರೆದಿದ್ದಾರೆ.
ಸ್ಮೃತಿಯ ಕವರ್ ಡ್ರೈವ್ ಮತ್ತು ಪಲಾಶ್ ಅವರ ಸಂಗೀತ ಇವೆರಡೂ ಸೇರಿ ಸುಂದರ ಜೀವನವನ್ನು ನಿರ್ಮಿಸಲಿ. ವರ–ವಧು ತಂಡಗಳ ನಡುವಿನ ‘ಸೆಲಬ್ರೇಶನ್ ಕ್ರಿಕೆಟ್ ಮ್ಯಾಚ್’ ಕೂಡ ಸುಂದರ ಸಂಕೇತ. ಜೀವನದ ಆಟದಲ್ಲಿ ಎರಡೂ ತಂಡಗಳು ಗೆಲ್ಲಲಿ,” ಎಂದು ಪ್ರಧಾನಿ ಮೋದಿ ಆಶೀರ್ವದಿಸಿದ್ದಾರೆ.

