ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸಂಸದೀಯ ಕ್ಷೇತ್ರ ವಾರಣಾಸಿಗೆ ಭೇಟಿ ನೀಡಿನಾಲ್ಕು ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಿಗೆ ಹಸಿರು ನಿಶಾನೆ ತೋರಿದ್ದಾರೆ.
ಇದು ಭಾರತದ ಸೆಮಿ-ಹೈಸ್ಪೀಡ್ ರೈಲುಗಳ ವಿಸ್ತರಣೆಯಲ್ಲಿ ಮತ್ತೊಂದು ಮೈಲಿಗಲ್ಲು ಸಾಧಿಸಿದಂತಾಗಿದೆ. ಈ ರೈಲುಗಳು ವಾರಾಣಸಿ-ಖಜುರಾಹೊ, ಲಕ್ನೋ-ಸಹಾರನ್‌ಪುರ, ಫಿರೋಜ್‌ಪುರ-ದೆಹಲಿ ಮತ್ತು ಎರ್ನಾಕುಲಂ-ಬೆಂಗಳೂರು ಮಾರ್ಗಗಳಲ್ಲಿ ಕಾರ್ಯನಿರ್ವಹಿಸಲಿದ್ದು, ದೇಶದ ಹಲವಾರು ಪ್ರದೇಶಗಳಲ್ಲಿ ವೇಗದ ಪ್ರಯಾಣ ಮತ್ತು ಸುಧಾರಿತ ಸಂಪರ್ಕವನ್ನು ಭರವಸೆ ನೀಡುತ್ತವೆ.
ದೇಶದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ಸಂಖ್ಯೆ 160 ಕ್ಕೆ ಏರಿದಂತಾಗಿದೆ. ಹೆಚ್ಚಿನ ರಾಷ್ಟ್ರಗಳ ಅಭಿವೃದ್ಧಿಯಲ್ಲಿ ಮೂಲಸೌಕರ್ಯವು ಪ್ರಮುಖ ಪಾತ್ರ ವಹಿಸಿದೆ. ಉತ್ತಮ ಸಂಪರ್ಕ ದೊರೆತ ತಕ್ಷಣ ನಗರದ ಅಭಿವೃದ್ಧಿಯು ತನ್ನಿಂತಾನೆ ಪ್ರಾರಂಭವಾಗುತ್ತದೆ. ಮೂಲಸೌಕರ್ಯವು ಬೃಹತ್ ಸೇತುವೆಗಳು ಮತ್ತು ಹೆದ್ದಾರಿಗಳಿಗೆ ಮಾತ್ರ ಸೀಮಿತವಾಗಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

