ಹೊಸ ದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಜಿ20 ನಾಯಕರ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದು, ಈ ವೇಳೆ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ ಜತೆ ಆತ್ಮೀಯವಾಗಿ ಮಾತನಾಡಿದರು.
ಇಬ್ಬರು ನಾಯಕರು ಕೈಕುಲುಕಿ, ನಗುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸದ್ಯ ಈ ವಿಡಿಯೊ ವೈರಲ್ ಆಗಿದೆ.
ಪರಸ್ಪರ ಕೈಕುಲುಕಿ ಇಬ್ಬರು ನಾಯಕರು ಅಭಿನಂದನೆ ಸಲ್ಲಿಸಿದರು. ಮೋದಿ ಮತ್ತು ಮೆಲೊನಿ ಕೊನೆಯ ಬಾರಿ ಜೂನ್‌ನಲ್ಲಿ ಕೆನಡಾದಲ್ಲಿ ನಡೆದ ಜಿ7 ಶೃಂಗಸಭೆಯಲ್ಲಿ ಭೇಟಿಯಾಗಿದ್ದರು. ಅಲ್ಲದೆ ನರೇಂದ್ರ ಮೋದಿ ಇತ್ತೀಚೆಗೆ ಜಾರ್ಜಿಯಾ ಮೆಲೊನಿ ಅವರ ಆತ್ಮಚರಿತ್ರೆ ʼಐ ಆ್ಯಮ್ ಜಾರ್ಜಿಯಾ – ಮೈ ರೂಟ್ಸ್, ಮೈ ಪ್ರಿನ್ಸಿಪಲ್ಸ್ʼನ ಭಾರತೀಯ ಆವೃತ್ತಿಗೆ ಮುನ್ನುಡಿ ಬರೆದಿದ್ದರು. ಮೋದಿ ಈ ಪುಸ್ತಕದ ಕುರಿತು ʼಮನ್ ಕಿ ಬಾತ್ʼನ 128ನೇ ಆವೃತ್ತಿಯಲ್ಲಿ ಮಾತನಾಡಿದ್ದರು. ಮೆಲೊನಿ ಅವರ ಪುಸಕ್ತದ ಮುನ್ನುಡಿ ಬರೆದಿರುವುದು ಮಹಾನ್ ಗೌರವ ಎಂದು ಮೋದಿ ಬಣ್ಣಿಸಿದ್ದರು. ಮೆಲೊನಿ ಬಗ್ಗೆ ತಮ್ಮ ಗೌರವ, ಮೆಚ್ಚುಗೆ ಮತ್ತು ಸ್ನೇಹವನ್ನು ವ್ಯಕ್ತಪಡಿಸಿದ್ದರು.

