Friday, November 28, 2025

ಮಕ್ಕಳು ಬರೆದ ಚಿತ್ರಗಳನ್ನು ನನಗೆ ತಲುಪಿಸಿ ಎಂದ ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಪ್ರಧಾನಿ ನರೇಂದ್ರ ಮೋದಿ ಉಡುಪಿಯಲ್ಲಿ ಲಕ್ಷ ಕಂಠ ಗೀತಾ ಪಾರಾಯಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಭಾಷಣ ಆರಂಭಿಸುವುದಕ್ಕೂ ಮುನ್ನ ಮಕ್ಕಳು ಬಿಡಿಸಿದ ಭಾವಚಿತ್ರಗಳನ್ನು ಸಂಗ್ರಹಿಸಿ ಕಳುಹಿಸುವಂತೆ ಎಸ್​ಪಿಜಿ ಹಾಗೂ ಸ್ಥಳೀಯ ಪೊಲೀಸರಲ್ಲಿ ಮನವಿ ಮಾಡಿದರು.

ಚಿತ್ರಗಳ ಹಿಂಭಾಗದಲ್ಲಿ ಮಕ್ಕಳು ತಮ್ಮ ವಿಳಾಸಗಳನ್ನು ಬರೆದರೆ, ತಾವೇ ಅವರಿಗೆ ಧನ್ಯವಾದ ಪತ್ರವನ್ನು ವೈಯಕ್ತಿಕವಾಗಿ ಕಳುಹಿಸುವುದಾಗಿ ಪ್ರಧಾನಿ ತಿಳಿಸಿದರು. ಮಕ್ಕಳ ಪ್ರಯತ್ನಗಳನ್ನು ಶ್ಲಾಘಿಸಿದ ಮೋದಿ, ಅವರಿಗೆ ಅನ್ಯಾಯವಾದರೆ ತಮಗೆ ದುಃಖವಾಗುತ್ತದೆ ಎಂದರು.

error: Content is protected !!