April 10, 2026
Friday, April 10, 2026
spot_img

ಮಧುರೈ ಅರುಲ್ಮಿಗು ಸುಬ್ರಮಣ್ಯ ಸ್ವಾಮಿ ದೇಗುಲಕ್ಕೆ ಪ್ರಧಾನಿ ಮೋದಿ ಭೇಟಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ತಮಿಳುನಾಡಿನ ಮಧುರೈ ಜಿಲ್ಲೆಯ ತಿರುಪರಂಕುಂದ್ರಂನಲ್ಲಿರುವ ಐತಿಹಾಸಿಕ ಅರುಲ್ಮಿಗು ಸುಬ್ರಮಣ್ಯ ಸ್ವಾಮಿ ದೇವಸ್ಥಾನಕ್ಕೆ ಇಂದು ಪ್ರಧಾನಿ ಮೋದಿ ಭೇಟಿ ನೀಡಿದ್ದಾರೆ.

ಈ ವೇಳೆ ಸುಬ್ರಹ್ಮಣ್ಯ ಸ್ವಾಮಿ ದರುಶನ ಪಡೆದ ಮೋದಿ, ವಿಶೇಷ ಪೂಜೆ ಸಲ್ಲಿಸಿದರು. ಈ ಭೇಟಿಯ ಸಮಯದಲ್ಲಿ, ಅವರು ₹4,400 ಕೋಟಿಗೂ ಹೆಚ್ಚು ಮೌಲ್ಯದ ಮೂಲಸೌಕರ್ಯ ಯೋಜನೆಗಳನ್ನು ಉದ್ಘಾಟಿಸಿದರು.

ಭಾರೀ ಸುದ್ದಿಯಲ್ಲಿದ್ದ ದೇವಸ್ಥಾನದ ಕಾರ್ತಿಕದೀಪ
ತಿರುಪರಂಕುಂದ್ರಂ ಅರುಲ್ಮಿಗು ಸುಬ್ರಮಣ್ಯ ಸ್ವಾಮಿ ದೇವಸ್ಥಾನದ ಬೆಟ್ಟದ ಮೇಲಿನ ದೀಪಸ್ತಂಭನಲ್ಲಿ ಕಾರ್ತಿಗೈ ದೀಪಂ ಬೆಳಗುವ ವಿಚಾರ ಭಾರೀ ಸುದ್ದಿಯಲ್ಲಿತ್ತು.

ಇದು ದೇವಾಲಯ ಮತ್ತು ಸಮೀಪದ ಸುಲ್ತಾನ್ ಸಿಕಂದರ್ ಬಾದುಷಾ ದರ್ಗಾ ನಡುವಿನ ದೀರ್ಘಕಾಲೀನ ಭೂಮಿ ವಿವಾದದ ಭಾಗವಾಗಿತ್ತು.

ಕೆಲವು ಮುಸ್ಲಿಂ ಸಂಘಟನೆಗಳು ಬೆಟ್ಟಕ್ಕೆ ಸಿಕಂದರ್ ಮಲೈ ಎಂದು ಮರುನಾಮಕರಣ ಮಾಡಬೇಕು ಎಂದು ಬೇಡಿಕೆ ಇಟ್ಟರು. ಹಿಂದು ಸಂಘಟನೆಗಳು ವಿರೋಧಿಸಿ ಪ್ರತಿಭಟನೆ ನಡೆಸಿದ್ದರು.

ಕಳೆದ 2025ರ ಡಿಸೆಂಬರ್‌ನಲ್ಲಿ ಮದ್ರಾಸ್ ಹೈಕೋರ್ಟ್‌ನ ನ್ಯಾಯಮೂರ್ತಿ ಜಿ.ಆರ್. ಸ್ವಾಮಿನಾಥನ್ ದೀಪತೂನ್‌ನಲ್ಲಿ ದೀಪ ಬೆಳಗಲು ಅನುಮತಿ ನೀಡಿದರು. ಆದರೆ ಸ್ಟಾಲಿನ್ ನೇತೃತ್ವದ ತಮಿಳುನಾಡು ಸರ್ಕಾರ (ಡಿಎಂಕೆ) ಇದನ್ನು ವಿರೋಧಿಸಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಮಾಡಿತ್ತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !