January17, 2026
Saturday, January 17, 2026
spot_img

ಪ್ರಧಾನಿ ಮೋದಿ ಹುಟ್ಟುಹಬ್ಬ: ಹಾಡಿನೊಂದಿಗೆ ಶುಭಕೋರಿದ ಜೋಶಿ-ಶಂಕರ್ ಮಹದೇವ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬ ಅಂಗವಾಗಿ ರಾಜಕೀಯ ಮುಖಂಡರು, ಸಚಿವರುಗಳು, ವಿಪಕ್ಷ ನಾಯಕರು, ಸಿನಿಮಾ ಸೆಲೆಬ್ರಿಟಿಗಳು, ಕ್ರೀಡಾ ತಾರೆಯರು, ಉದ್ಯಮಿಗಳು ಶುಭಾಶಯಗಳನ್ನು ಕೋರಿದ್ದಾರೆ.

ಇದರ ನಡುವೆ ಮೋದಿ ಅವರ ಅಭಿಮಾನಿ, ಸಿನಿಮಾ ಸಾಹಿತಿ ಪ್ರಸೂನ್ ಜೋಶಿ ಅವರು ಮೋದಿ ಅವರ ಗುಣಗಾನ ಮಾಡಿ ಹಾಡೊಂದನ್ನು ರಚಿಸಿದ್ದು, ಶಂಕರ್ ಮಹದೇವ್ ಹಾಡು ಹಾಡಿದ್ದಾರೆ.

ಮೋದಿ ಅವರ ಹುಟ್ಟುಹಬ್ಬದ ವಿಶೇಷವಾಗಿ ಹಾಡನ್ನು ಬಿಡುಗಡೆ ಮಾಡಲಾಗಿದೆ.

https://www.youtube.com/watch?v=RX6dxV4h4pg

ಮೋದಿ ಅವರ 75ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ‘ವಂದನೀಯ ಹೇ ದೇಶ್​ ಮೇರ’ ಎಂಬ ಹಾಡನ್ನು ಬಿಡುಗಡೆ ಮಾಡಲಾಗಿದೆ. ಹಾಡಿಗೆ ಸಾಹಿತ್ಯವನ್ನು ಪ್ರಸೂನ್ ಜೋಶಿ ಬರೆದಿದ್ದಾರೆ. ಹಾಡು ಹಾಡಿರುವುದು ಶಂಕರ್ ಮಹದೇವನ್, ಸಂಗೀತ ನೀಡಿರುವುದು ಸಹ ಶಂಕರ್ ಮಹದೆವನ್ ಅವರೇ, ಹಾಡು ಟಿ-ಸೀರೀಸ್ ಯೂಟ್ಯೂಬ್ ಚಾನೆಲ್​​ನಲ್ಲಿ ಬಿಡುಗಡೆ ಆಗಿದೆ. ನರೇಂದ್ರ ಮೋದಿ ಅವರ ಸಾಧನೆಗಳನ್ನು, ವ್ಯಕ್ತಿತ್ವವನ್ನು ಹಾಡಿನಲ್ಲಿ ಕೊಂಡಾಡಲಾಗಿದೆ.

ಹಾಡಿನಲ್ಲಿ ಮೋದಿ ಅವರ ಹಲವು ವಿಡಿಯೋ ತುಣುಕುಗಳನ್ನು ಬಳಸಿಕೊಳ್ಳಲಾಗಿದೆ. ಇತ್ತೀಚೆಗೆ ನಡೆಸಲಾದ ಆಪರೇಷನ್ ಸಿಂಧೂರ್ ವಿಡಿಯೋಗಳು, ಮೋದಿ ಅವರ ಭಾಷಣದ ವಿಡಿಯೋ ತುಣುಕುಗಳು, ಸೈನ್ಯದ ಪಥಸಂಚಲನದ ದೃಶ್ಯಗಳು, ರಾಮ ಮಂದಿರದ ವಿಡಿಯೋ, ಮೋದಿ ಅವರ ವಿದೇಶ ಪ್ರವಾಸದ ವಿಡಿಯೋ ತುಣುಕುಗಳು ಇನ್ನೂ ಕೆಲವು ವಿಡಿಯೋ ತುಣುಕುಗಳನ್ನು ಹಾಡಿನಲ್ಲಿ ಬಳಸಿಕೊಳ್ಳಲಾಗಿದೆ.

ಟಾಯ್ಲೆಟ್ ನಿರ್ಮಾಣ, ಉಜ್ವಲ ಯೋಜನೆ, ಸ್ವಚ್ಛ ಭಾರತ್ ಯೋಜನೆ ಇನ್ನೂ ಹಲವು ಯೋಜನೆಗಳ ಉಲ್ಲೇಖ ಮಾಡಲಾಗಿದ್ದು, ವಿಡಿಯೋಗಳನ್ನು ಬಳಸಿಕೊಳ್ಳಲಾಗಿದೆ.

3:35 ನಿಮಿಷದ ಹಾಡು ಸೆಪ್ಟೆಂಬರ್ 17ರಂದು ಬಿಡುಗಡೆ ಆಗಿದ್ದು ಒಂದು ಗಂಟೆಗಳಲ್ಲಿ 2500ಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. 500ಕ್ಕೂ ಮಂದಿ ಲೈಕ್ ಸಹ ಮಾಡಿದ್ದಾರೆ.

Must Read

error: Content is protected !!