ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ಮೋದಿ ಶ್ರೀಕೃಷ್ಣಮಠದ ಲಕ್ಷಕಂಠ ಗೀತಾ ಪಾರಾಯಣದಲ್ಲಿ ಸಹಿತ ಇತರ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಉಡುಪಿಗೆ ಆಗಮಿಸಿದ್ದಾರೆ.
ಮಂಗಳೂರು ಏರ್‌ಪೋರ್ಟ್‌ನಿಂದ ಆದಿ ಉಡುಪಿಯ ಹೆಲಿಪ್ಯಾಡ್‌ಗೆ ಪ್ರಧಾನಿ ಬಂದಿದ್ದಾರೆ. ಬಿಗಿ ಭದ್ರತೆಯ ನಡುವೆ ಬನ್ನಂಜೆ ವೃತ್ತದಿಂದ ರೋಡ್ ಶೋ ಆರಂಭವಾಗಿದೆ.
ಕಲ್ಸಂಕ ವೃತ್ತದವರೆಗೂ ನಡೆಯುವ ರೋಡ್‌ಶೋನಲ್ಲಿ ಪ್ರಧಾನಿಯನ್ನು ನೋಡಲು ಸಾವಿರಾರು ಜನರು ಆಗಮಿಸಿದ್ದಾರೆ. ಪ್ರಧಾನಿಗೆ ಹೂವಿನ ಸುರಿಮಳೆಯ ಸ್ವಾಗತ ಕೋರಲಾಗಿದೆ.

