January19, 2026
Monday, January 19, 2026
spot_img

ಪೋಕ್ಸೋ ಕೇಸ್‌ನ ವಿಕ್ಟಿಮ್‌ ಹೆಸರು, ಅಡ್ರೆಸ್‌ ಬಹಿರಂಗ: ಶ್ರೀ ರಾಮುಲು ವಿರುದ್ಧ ಎಫ್‌ಐಆರ್‌


ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬಳ್ಳಾರಿ ಜಿಲ್ಲೆಯಲ್ಲಿ ನಡೆದಿದ್ದ ಸಮಾವೇಶವೊಂದರಲ್ಲಿ ಪೋಕ್ಸೋ ಕೇಸ್‌ನ ಸಂತ್ರಸ್ತೆಯ ಹೆಸರು, ವಿಳಾಸ ಬಹಿರಂಗಪಡಿಸಿದ ಆರೋಪದಡಿ ಮಾಜಿ ಸಚಿವ ಶ್ರೀರಾಮುಲು ವಿರುದ್ಧ ಪ್ರಕರಣ ದಾಖಲಾಗಿದೆ.

ಬಳ್ಳಾರಿಯ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಭಾಷಣದ ವೇಳೆ ಸಂವೇದನಾ ಶೀಲ ವಿವರ ಉಲ್ಲೇಖಿಸಿ, ಪೋಕ್ಸೋ ಕಾಯ್ದೆಯನ್ನು ಸ್ಪಷ್ಟವಾಗಿ ಉಲ್ಲಂಘಿಸಿರುವುದಾಗಿ ದೂರಿನಲ್ಲಿ ಆರೋಪಿಸಲಾಗಿದೆ. ದೂರಿನನ್ವಯ ಮಾಜಿ ಸಚಿವ ಶ್ರೀರಾಮುಲು ವಿರುದ್ಧ ಪೋಕ್ಸೋ ಅಡಿಯಲ್ಲಿ ಕೇಸ್ ದಾಖಲಾಗಿದೆ.

ಜ.17ರಂದು ನಡೆದ ಬಿಜೆಪಿಯ ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ಮಾತನಾಡುವಾಗ ಶ್ರೀರಾಮುಲು ಹೆಸರು ಬಹಿರಂಗಪಡಿಸಿದ್ದರು. ಬಳ್ಳಾರಿ ಗಾಂಜಾ, ಡ್ರಗ್ಸ್ ಹಬ್ ಆಗಿದೆ. ಡ್ರಗ್ ಸೇವಿಸಿಯೇ ಶಾಲಾ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಹೇಳುತ್ತಾ, ಪೋಕ್ಸೋ ಕೇಸ್‌ನ ಸಂತ್ರಸ್ತೆಯ ಹೆಸರು, ವಿಳಾಸ, ತರಗತಿ ಹಾಗೂ ಓದುವ ಶಾಲೆಯ ಹೆಸರನ್ನೂ ಕೂಡ ಬಗಿರಂಗಪಡಿಸಿದ್ದರು.

Must Read

error: Content is protected !!