ಹೊಸ ದಿಗಂತ ವರದಿ, ಬೆಳಗಾವಿ:
ಜಿಲ್ಲೆಯ ಗೋಕಾಕ ಮೂಲದ ಇಬ್ಬರು ಅಂತಾರಾಜ್ಯ ಕಳವು ಅರೋಪಿಗಳನ್ನು ಬೈಕ್ ಕಳವು ನಡೆಸುತ್ತಿದ್ದ ವೇಳೆ ಬೆಳಗಾವಿ ಪೊಲೀಸರು ಬಂದಿಸಿದ್ದಾರೆ.
ಗೋಕಾಕ ಮೂಲದ ಲಕ್ಷ್ಮಣ ವಿರುಪಾಕ್ಷಿ ಕಣಬರಗಿ (31) ಹಾಗೂ ಫಕಿರಪ್ಪ ಕರಿಗಾರ (25) ಬಂಧಿತರು.
ಆರೋಪಿಗಳಿಂದ ಬೆಳಗಾವಿ ಜಿಲ್ಲೆಯ ಸಂಕೇಶ್ವರ ಪೊಲೀಸರು 18,30,000 ಮೌಲ್ಯದ 27 ಬೈಕ್ ಗಳನ್ನು ವಶಕ್ಕೆ ಪಡೆದಿದ್ದಾರೆ.
ಈ ಆರೋಪಿಗಳು ಸಂಕೇಶ್ವರ ಪಟ್ಟಣ, ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಮತ್ತು ಬೆಳಗಾವಿ ಶಹರದ ವಿವಿಧ ಪೊಲೀಸ್ ಠಾಣೆ ಹಾಗೂ ಮಹಾರಾಷ್ಟ್ರದ ಚಂದಗಡ ಪೊಲೀಸ್ ಠಾಣೆಯ ವ್ಯಾಪ್ತಿಗಳಲ್ಲಿ ಕಳವು ಮಾಡಿದ್ದರು.
ಒಟ್ಟು 26 ಬೈಕ್ ಹಾಗೂ ಕೃತ್ಯಕ್ಕೆ ಉಪಯೋಗಿಸಿದ 1 ಬೈಕ್ ಸಹಿತ ಒಟ್ಟು.18.30 ಲಕ್ಷ ಮೌಲ್ಯದ 27 ಬೈಕ್ ಗಳನ್ನು ಜಪ್ತಿ ಮಾಡಲಾಗಿದ್ದು, ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಈ ಪ್ರಕರಣದಲ್ಲಿ ಕಳ್ಳರನ್ನು ಪತ್ತೆ ಮಾಡಿ ಬಂಧಿಸುವಲ್ಲಿ ಯಶಸ್ವಿಯಾದ ಸಿಪಿಐ ಎಸ್. ಎಮ್ ಅವಜಿ, ಪಿಎಸ್ಐಎಸ್ ಶೆಟ್ಟಿನ್ನವರ, ಪಿ.ಎಸ್.ಐ, ವಿಠಲ ನಾಯಿಕ, ಎಎಸ್ಐ ಎಲ್.ಎಸ್ ಖೋತ ಹಾಗೂ ಸಿಬ್ಬಂದಿ ಜನರಾದ ಎಸ್.ಎಲ್.ಗಳತಗಿ, ಎ.ಬಿ.ಮುರ್ಕಿಭಾವಿ, ಎಸ್.ಎಮ್.ಯಕ್ಷಂಬಿ, ಕೆ.ಡಿ.ಹಿರೇಮಠ, ಎಸ್.ಬಿ.ಪೂಜೇರಿ, ಎಸ್.ಎಸ್.ಶುದರೆ, ಜಿ.ಕುಡ್ಡಗೋಳ, ಬಿ.ಟಿ .ಪಾಟೀಲ, ಎಮ್.ಕೆ.ಅತ್ತಾರ, ಎಸ್.ಕೆ.ಹೊಸೂರ, ಎಸ್.ಬಿ.ಮಠಪತಿ ಹಾಗೂ ಟೆಕ್ನಿಕಲ್ ಸೆಲ್ ಬೆಳಗಾವಿ ಸಿಬ್ಬಂದಿ ಜನರಾದ ವಿನೋದ ತಕ್ಕನ್ನವರ, ಸಚಿನ ಪಾಟೀಲ ಇವರ ಕಾರ್ಯವನ್ನು ಬೆಳಗಾವಿ ಎಸ್ಪಿ ರಾಮರಾಜನ್ ಅವರು ಶ್ಲಾಘಿಸಿದ್ದಾರೆ.



