March 23, 2026
Monday, March 23, 2026
spot_img

ಮಂಗಳೂರು ಜಿಲ್ಲಾ ಕಾರಾಗೃಹಕ್ಕೆ ಪೊಲೀಸರ ದಿಢೀರ್‌ ದಾಳಿ: ಮತ್ತೆ ಮೊಬೈಲ್ ಪತ್ತೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಂಗಳೂರು ನಗರದ ಜಿಲ್ಲಾ ಕಾರಾಗೃಹದಲ್ಲಿ ಮತ್ತೆ ಮೊಬೈಲ್ ಪತ್ತೆಯಾಗಿದೆ.

ಜಿಲ್ಲಾ ಕಾರಾಗೃಹಕ್ಕೆ ದಿಢೀರ್‌ ದಾಳಿ ನಡೆಸಿದ ಬರ್ಕೆ ಠಾಣೆ ಪೊಲೀಸರು, ಕೈದಿಗಳು ಬಳಸುತ್ತಿದ್ದ ಮೂರು ಮೊಬೈಲ್‌ಗಳನ್ನು ಪತ್ತೆ ಮಾಡಿ ವಶಕ್ಕೆ ಪಡೆದುಕೊಂಡಿದ್ದಾರೆ.

ಫೆ.6ರಂದು ಮಧ್ಯರಾತ್ರಿ ಜೈಲು ಅಧೀಕ್ಷಕರ ನೇತೃತ್ವದಲ್ಲಿ ಪೊಲೀಸರು ಶೋಧ ಕಾರ್ಯಾಚರಣೆ ನಡೆಸಿದ್ದು, ಕಾರಾಗೃಹದ ಎ ಮತ್ತು ಬಿ ಬ್ಯಾರಕ್‌ನಲ್ಲಿ ಸಂಪೂರ್ಣ ಪರಿಶೀಲನೆ ಕೈಗೊಂಡಿದ್ದರು. ಈ ವೇಳೆ, ಎ ಬ್ಯಾರಕ್‌ನಲ್ಲಿ ಎರಡು ಮತ್ತು ಬಿ ಬ್ಯಾರಕ್‌ನಲ್ಲಿ ಒಂದು ಕೀ ಪ್ಯಾಡ್‌ ಮೊಬೈಲ್ ಫೋನ್ ಪತ್ತೆಯಾಗಿದೆ.

ಕೈದಿಗಳಾದ ಇಬ್ರಾಹಿಂ ಹರ್ಷದ್, ಅಸ್ಗರ್‌, ಚಂದ್ರಹಾಸ ಪೂಜಾರಿ ಎಂಬವರ ಬಳಿ ಮೊಬೈಲ್‌ ಪತ್ತೆಯಾಗಿದ್ದು, ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !