Saturday, December 6, 2025

ನೊಬೆಲ್ ಕೊಡಿ..ನೊಬೆಲ್ ಕೊಡಿ.. ಅಂತಿದ್ದ ಟ್ರಂಪ್ ಕೈ ಸೇರಿತು ‘ಶಾಂತಿ ಪ್ರಶಸ್ತಿ’: ಇನ್ನಾದ್ರೂ ಸಮಾಧಾನ ಆಗಿರಬೇಕಲ್ವಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಫಿಫಾ ವಿಶ್ವಕಪ್‌ನ ಡ್ರಾನಲ್ಲಿ ರಾಜಕೀಯ ಡ್ರಾಮಾ | ಟ್ರಂಪ್ ಕೈ ಸೇರಿತು ‘ಶಾಂತಿ ಪ್ರಶಸ್ತಿ’: ಅದ್ರೆ ನೊಬೆಲ್​​ ಅಲ್ಲ!

2026ರ ಫಿಫಾ ವಿಶ್ವಕಪ್‌ನ ಅಧಿಕೃತ ಡ್ರಾ ಸಮಾರಂಭದಲ್ಲಿ ಅಪರೂಪದ ರಾಜಕೀಯ-ಕ್ರೀಡಾ ಕ್ಷಣಕ್ಕೆ ಸಾಕ್ಷಿಯಾಯಿತು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಫಿಫಾ ಹೊಸದಾಗಿ ಸ್ಥಾಪಿಸಿರುವ ‘ಶಾಂತಿ ಪ್ರಶಸ್ತಿ’ ನೀಡಲಾಗಿದ್ದು, ಜಾಗತಿಕ ವೇದಿಕೆಯಲ್ಲಿ ಈ ಗೌರವ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ. ಅಮೆರಿಕ, ಮೆಕ್ಸಿಕೊ ಮತ್ತು ಕೆನಡಾ ಸಹ-ಆತಿಥ್ಯ ವಹಿಸುತ್ತಿರುವ ವಿಶ್ವಕಪ್ ಹಿನ್ನೆಲೆಯಲ್ಲೇ ಈ ಪ್ರಶಸ್ತಿ ಪ್ರದಾನ ನಡೆಯಿತು.

ಫಿಫಾ ಅಧ್ಯಕ್ಷ ಜಿಯಾನಿ ಇನ್ಫಾಂಟಿನೊ ಅವರು ಟ್ರಂಪ್‌ಗೆ ಚಿನ್ನದ ಪದಕ ಮತ್ತು ವಿಶೇಷ ಟ್ರೋಫಿಯನ್ನು ಪ್ರದಾನ ಮಾಡಿ, ಜನರನ್ನು ಒಗ್ಗೂಡಿಸುವ ನಾಯಕತ್ವಕ್ಕಾಗಿ ಶ್ಲಾಘಿಸಿದರು. ಶಾಂತಿ, ಸಂವಾದ ಮತ್ತು ಭವಿಷ್ಯದ ಪೀಳಿಗೆಗೆ ಭರವಸೆ ಮೂಡಿಸುವ ಪ್ರಯತ್ನಗಳನ್ನು ಗುರುತಿಸುವ ಉದ್ದೇಶದಿಂದ ಈ ಪ್ರಶಸ್ತಿಯನ್ನು ರೂಪಿಸಲಾಗಿದೆ ಎಂದು ಫಿಫಾ ತಿಳಿಸಿತು. ಪ್ರಶಸ್ತಿ ಸ್ವೀಕರಿಸಿದ ಟ್ರಂಪ್, ಇದನ್ನು ತಮ್ಮ ಜೀವನದ ಪ್ರಮುಖ ಗೌರವಗಳಲ್ಲಿ ಒಂದೆಂದು ಬಣ್ಣಿಸಿದರು. ಜೊತೆಗೆ ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ಹಾಗೂ ಆತಿಥೇಯ ರಾಷ್ಟ್ರಗಳ ನಾಯಕರಾದ ಕೆನಡಾದ ಪ್ರಧಾನಿ ಮಾರ್ಕ್ ಕಾರ್ನಿ ಮತ್ತು ಮೆಕ್ಸಿಕೋ ಅಧ್ಯಕ್ಷೆ ಕ್ಲೌಡಿಯಾ ಶೀನ್‌ಬಾಮ್ ಅವರ ಸಹಕಾರವನ್ನು ಪ್ರಶಂಸಿಸಿದರು.

ಫಿಫಾ ಪ್ರಶಸ್ತಿಯ ಪ್ರದಾನದಿಂದ ವಿಶ್ವಕಪ್ ವೇದಿಕೆಗೆ ರಾಜಕೀಯ ಅರ್ಥ ನೀಡಿದೆಯೆಂಬ ಅಭಿಪ್ರಾಯಗಳು ಈಗಾಗಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿಧ್ವನಿಸಿದ್ದಾವೆ.

error: Content is protected !!