ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶ ವಿದೇಶದಲ್ಲೂ ಪ್ರಧಾನಿ ಮೋದಿ ಸರ್ಕಾರದ ಮನ್ನಣೆ, ಜನಪ್ರಿಯತೆ ಹೆಚ್ಚಿಸಿದೆ. ಇಷ್ಟೇ ಅಲ್ಲ ಮೂರನೇ ಅವಧಿ ಮೋದಿ ಸರ್ಕಾರದ ವೇಳೆ ನಡೆದ ವಿಧಾನಸಭಾ ಚುನಾವಣೆಯಲ್ಲೂ ಬಿಜೆಪಿ ಮೈಲುಗೈ ಸಾಧಿಸಿದೆ. ಆದ್ರೆ ಇತ್ತ ಇದೀಗ ಉದ್ಧವಾ ಠಾಕ್ರೆ ಶಿವಸೇನೆ ಬಣದ ನಾಯಕ ಸಂಜಯ್ ರಾವತ್ , ಡಿಸೆಂಬರ್ 19ಕ್ಕೆ ರಾಜಕೀಯ ಭೂಕಂಪ ಸಂಭವಿಸಲಿದೆ. ಇದರ ಪರಿಣಾಮ ಮೋದಿ ಸರ್ಕಾರ ಪತನವಾಗಲಿದೆ ಎಂದು ಸ್ಫೋಟಕ ಭವಿಷ್ಯ ನುಡಿದಿದ್ದಾರೆ.
ಡೆಲ್ಲಿ ಪೊಲಿಟಿಕಲ್ ಸರ್ಕಲ್ ಜೊತೆಗಿನ ಮಾತುಕತೆಯಲ್ಲಿ ಸಂಜಯ್ ರಾವತ್, ರಾಜಕೀಯ ಭೂಕಂಪದಲ್ಲಿ ಮೋದಿ ಸರ್ಕಾರ ಪನತವಾಗಲಿದೆ. ಡಿಸೆಂಬರ್ 19 ಅತ್ಯಂತ ಪ್ರಮುಖ ದಿನ ಎಂದಿದ್ದಾರೆ. ಅಮೆರಿಕದ ಮಧ್ಯಪ್ರವೇಶವಾಗಿದೆ. ಮಹತ್ವದ ಬದಲಾವಣೆಗಳು ನಡೆಯುತ್ತಿದೆ ಎಂದು ಹೇಳಿದ್ದಾರೆ.
ಬಿಜೆಪಿ ಈಗಾಗಲೇ ತನ್ನ ನಾಯಕರಿಗೆ ಮಹತ್ವದ ಸೂಚನೆ ನೀಡಿದೆ. ಪ್ರಮುಖ ನಾಯಕರು ದೆಹಲಿಯಲ್ಲೇ ಇರಲು ಸೂಚನೆ ನೀಡಿದ್ದಾರೆ. ಯಾರೂ ಕೂಡ ದೆಹಲಿ ಬಿಟ್ಟು ತೆರಳದಂತೆ ಸೂಚಿಸಿದ್ದಾರೆ ಎಂದು ಸಂಜಯ್ ರಾವತ್ ಹೇಳಿದ್ದಾರೆ. ಈ ಸೂಚನೆ ಬಿಜಿಪಿಯಲ್ಲೇ ಕೆಲ ಬದಲಾವಣೆಗಳ ಸೂಚನೆ ನೀಡುತ್ತಿದೆ ಎಂದು ಊಹಿಸಿದ್ದಾರೆ.

