April 10, 2026
Friday, April 10, 2026
spot_img

ಬಂಗಾಳದಲ್ಲಿ ‘ರಾಜಕೀಯ ಬಿರುಗಾಳಿ’: ಓವೈಸಿಯ AIMIM – AJUP ಮೈತ್ರಿ ಕಟ್, ಹುಮಾಯೂನ್ ಕಬೀರ್‌ಗೆ ಶಾಕ್

ಹೊಸದಿಗಂತ ಡಿಜಿಟಲ್ ಡೆಸ್ಕ್:

2026ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಇನ್ನೂ ಸಮಯವಿದ್ದರೂ, ರಾಜ್ಯ ರಾಜಕೀಯದಲ್ಲಿ ಈಗಾಗಲೇ ಮಹತ್ವದ ಬೆಳವಣಿಗೆ ನಡೆದಿದೆ.

ಅಸಾದುದ್ದೀನ್ ಓವೈಸಿ ನೇತೃತ್ವದ AIMIM ಪಕ್ಷವು ಹುಮಾಯೂನ್ ಕಬೀರ್ ಅವರ ಆಮ್ ಜನತಾ ಉನ್ನಯನ್ ಪಕ್ಷ (AJUP) ಜೊತೆಗೆ ಮಾಡಿಕೊಂಡಿದ್ದ ಮೈತ್ರಿಯನ್ನು ಮುರಿದುಕೊಂಡಿದ್ದು, ಮುಂದಿನ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸುವುದಾಗಿ ಘೋಷಿಸಿದೆ. ಇತ್ತೀಚೆಗೆ ಈ ಎರಡು ಪಕ್ಷಗಳು ಮೈತ್ರಿ ಘೋಷಿಸಿದ್ದರೂ, ಕೆಲವೇ ವಾರಗಳಲ್ಲಿ ಈ ರಾಜಕೀಯ ಸಮೀಕರಣ ಬದಲಾಗಿದೆ.

ಇದನ್ನೂ ಓದಿ:

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಹುಮಾಯೂನ್ ಕಬೀರ್ ಸಂಬಂಧಿತ ವಿಡಿಯೊ ಹಾಗೂ ಬಿಜೆಪಿ ಜೊತೆ ₹1,000 ಕೋಟಿ ಒಪ್ಪಂದದ ಆರೋಪಗಳು ಈ ನಿರ್ಧಾರಕ್ಕೆ ಪ್ರಮುಖ ಕಾರಣವೆಂದು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ. ಈ ಆರೋಪಗಳನ್ನು ತೃಣಮೂಲ ಕಾಂಗ್ರೆಸ್ ಬಹಿರಂಗವಾಗಿ ಮುಂದಿಟ್ಟಿದ್ದು, ಮುಸ್ಲಿಂ ಮತಗಳನ್ನು ವಿಭಜಿಸುವ ಪ್ರಯತ್ನ ನಡೆದಿದೆ ಎಂದು ಟಿಎಂಸಿ ಆರೋಪಿಸಿದೆ.

ಆದರೆ ಹುಮಾಯೂನ್ ಕಬೀರ್ ಈ ಆರೋಪಗಳನ್ನು ತಳ್ಳಿಹಾಕಿದ್ದು, ಬಿಡುಗಡೆಗೊಂಡಿರುವ ಆಡಿಯೋ ಮತ್ತು ವಿಡಿಯೊಗಳು ನಕಲಿ ಎಂದು ಪ್ರತಿಕ್ರಿಯಿಸಿದ್ದಾರೆ. ಯಾವುದೇ ಪಕ್ಷದೊಂದಿಗೆ ಹಣಕಾಸು ಒಪ್ಪಂದ ಮಾಡಿಕೊಂಡಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !