ಹೊಸದಿಗಂತ ಡಿಜಿಟಲ್ ಡೆಸ್ಕ್:
ಬ್ಯಾಡರಹಳ್ಳಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಕನ್ವರ್ಟರ್ ಸಾಮರ್ಥ್ಯ ಹೆಚ್ಚಿಸುವ ಮಹತ್ವದ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಬ್ಯಾಡರಹಳ್ಳಿ ಮತ್ತು ಸುತ್ತಮುತ್ತಲಿನ ಪ್ರದೇಶಗಳ ನಿವಾಸಿಗಳಿಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ತಿಳಿಸಿದೆ.
ಈ ಕಾಮಗಾರಿಯ ಕಾರಣದಿಂದಾಗಿ ಡಿಸೆಂಬರ್ 19ರವರೆಗೆ ಪ್ರತಿದಿನ ಬೆಳಗ್ಗೆ 10 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಒಟ್ಟು 12 ಗಂಟೆಗಳ ಕಾಲ ವಿದ್ಯುತ್ ಸರಬರಾಜಿನಲ್ಲಿ ಅಡಚಣೆಯಾಗಲಿದೆ.
ಬೆಸ್ಕಾಂ ಪಶ್ಚಿಮ ವೃತ್ತದ ಅಧೀಕ್ಷಕ ಎಂಜಿನಿಯರ್ ನೀಡಿರುವ ಮಾಹಿತಿ ಪ್ರಕಾರ, ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ಕಡಿತವಾಗುವ ಸಾಧ್ಯತೆ ಇದೆ:
ಮಾದೇಶ್ವರನಗರ, ಪ್ರಸನ್ನ ಲೇಔಟ್, ಹೊಸಹಳ್ಳಿ.
ಇಂಡಸ್ಟ್ರಿಯಲ್ ಏರಿಯಾ, ಹೇರೋಹಳ್ಳಿ, ತುಂಗಾನಗರ.
ವಿಶ್ವೇಶ್ವರ ನಗರ, ಅಂಜನಾ ನಗರ, ಅನ್ನಪೂರ್ಣೇಶ್ವರಿ ನಗರ.
ಸುಂಕದ ಕಟ್ಟಿ, ನೀಲಗಿರಿ ಹೆಗ್ಗನಹಳ್ಳಿ, ಕೊಡಿಗೆಹಳ್ಳಿ, ಸ್ಕಂದ ನಗರ.
ಚಿಕ್ಕಗೊಲ್ಲರಹಟ್ಟಿ, ಸೀಗೆಹಳ್ಳಿ, ಪದ್ಮಾವತಿ ಇಂಡಸ್ಟ್ರಿಯಲ್ ಏರಿಯಾ.
ಶಾಂತಿಲಾಲ್ ಲೇಔಟ್, ಬಿಬಿಎಂಪಿ ಪ್ಲಾಂಟ್, ರಂಗೇಗೌಡ ಲೇಔಟ್.
ಕನ್ನಹಳ್ಳಿ, ಸುಂಕದಕಟ್ಟೆ ಇಂಡಸ್ಟ್ರಿಯಲ್ ಏರಿಯಾ.
ಡಿ ಗ್ರೂಪ್ ಬಡಾವಣೆ, ಆರ್.ಎಚ್.ಸಿ.ಎಸ್ ಲೇಔಟ್ ಮತ್ತು ಸುತ್ತಲಿನ ಪ್ರದೇಶಗಳು. ಬ್ಯಾಡರಹಳ್ಳಿ ಹಾಗೂ ಸುತ್ತಲಿನ ನಿವಾಸಿಗಳು ಈ ಅವಧಿಯಲ್ಲಿ ಸಹಕರಿಸುವಂತೆ ಬೆಸ್ಕಾಂ ಮನವಿ ಮಾಡಿದೆ.

