January18, 2026
Sunday, January 18, 2026
spot_img

ಪರಪ್ಪನ ಅಗ್ರಹಾರದಲ್ಲಿ ಲೈಬ್ರರಿ ಕ್ಲರ್ಕ್ ಕೆಲಸ ಪಡೆದುಕೊಂಡ ಪ್ರಜ್ವಲ್ ರೇವಣ್ಣ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅತ್ಯಾಚಾರ ಪ್ರಕರಣದ ತಪ್ಪಿತಸ್ಥ ಮಾಜಿ ಸಂಸದ ಪ್ರಜ್ವಲ್ ರೇವಣ್ಣ, ಈಗ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ. ಸಾಮಾನ್ಯ ಕೈದಿಗಳಂತೆ ಶಿಕ್ಷೆ ಅನುಭವಿಸುತ್ತಿರುವ ಅವರು, ಜೈಲಿನಲ್ಲಿ ಕೈದಿಗಳಿಗೆ ಇರುವ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇದರಲ್ಲಿ ಭಾಗವಾಗಿ, ಜೈಲು ಆಡಳಿತವು ಪ್ರಜ್ವಲ್ ರೇವಣ್ಣರನ್ನು ಲೈಬ್ರರಿಯ ಕ್ಲರ್ಕ್ ಆಗಿ ನೇಮಿಸಿದೆ.

ಅವರಿಗೆ ಪುಸ್ತಕಗಳನ್ನು ನೀಡುವುದು, ನೋಂದಣಿ ನಿರ್ವಹಿಸುವುದು ಹಾಗೂ ಲೈಬ್ರರಿಯ ಸರಿಯಾದ ಕಾರ್ಯವಿಧಾನ ನೋಡಿಕೊಳ್ಳುವ ಜವಾಬ್ದಾರಿ ನೀಡಲಾಗಿದೆ. ಜೈಲಿನ ನಿಯಮದಂತೆ ದಿನಗೂಲಿ ಆಧಾರದ ಮೇಲೆ ಕೈದಿಗಳಿಗೆ ಕೆಲಸ ನೀಡಲಾಗುತ್ತಿದ್ದು, ಪ್ರಜ್ವಲ್‌ಗೂ ದಿನಕ್ಕೆ 522 ರೂಪಾಯಿ ವೇತನ ನೀಡಲಾಗುತ್ತಿದೆ. ಆದರೆ ಕೆಲಸಕ್ಕೆ ಹಾಜರಾಗದಿದ್ದರೆ ಅವರಿಗೆ ಯಾವುದೇ ಸಂಬಳ ಸಿಗುವುದಿಲ್ಲ.

ಸದ್ಯ ಅವರು ಒಂದು ದಿನದ ಮಟ್ಟಿಗೆ ಮಾತ್ರ ಕೆಲಸ ಮಾಡಿದ್ದು, ನಿಯಮಾನುಸಾರ ಮುಂದಿನ ದಿನಗಳಲ್ಲಿ ಕೆಲಸದ ಅವಧಿ ಹೆಚ್ಚುವ ಸಾಧ್ಯತೆ ಇದೆ. ಆದರೆ ಟ್ರಯಲ್ ಕೋರ್ಟ್‌ಗೆ ಹಾಜರಾಗಬೇಕಾದ ಸಂದರ್ಭಗಳು, ವಕೀಲರೊಂದಿಗೆ ನಡೆಯುವ ಕಾನೂನು ಚರ್ಚೆಗಳು ಇತ್ಯಾದಿ ಕಾರಣಗಳಿಂದ ಪ್ರಜ್ವಲ್ ರೇವಣ್ಣರನ್ನು ಪ್ರತಿದಿನದ ಕಾರ್ಯಗಳಲ್ಲಿ ಸಂಪೂರ್ಣವಾಗಿ ನಿಯೋಜಿಸಲಾಗಿಲ್ಲ.

Must Read

error: Content is protected !!