January19, 2026
Monday, January 19, 2026
spot_img

ನವಿ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟಿಸಿದ ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ನವಿ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ 1ನೇ ಹಂತವನ್ನು ಪ್ರಧಾನಿ ಮೋದಿ ಅವರು ಇಂದು ಉದ್ಘಾಟಿಸಿದ್ದಾರೆ.

ಈ ಹೊಸ ವಿಮಾನ ನಿಲ್ದಾಣವು ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲಿನ ಭಾರೀ ಸಂಚಾರ ಹೊರೆಯನ್ನು ಕಡಿಮೆ ಮಾಡುವ ನಿರೀಕ್ಷೆಯಿದೆ. ಸುಮಾರು 19,650 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಗ್ರೀನ್‌ಫೀಲ್ಡ್ ಯೋಜನೆಯಾದ ನವಿ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (NMIA) ವಿಶ್ವದ ಗಮನ ಸೆಳೆಯಲಿದೆ.

1,160 ಹೆಕ್ಟೇರ್‌ಗಳಲ್ಲಿ ಹರಡಿರುವ ಹೊಸ ವಿಮಾನ ನಿಲ್ದಾಣವು ಭಾರತದ ವಾಯುಯಾನ ಸಾಮರ್ಥ್ಯವನ್ನು ಹೆಚ್ಚಿಸಲು ಮತ್ತು ಮುಂಬೈನ ಸದ್ಯದ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲಿನ ಭಾರೀ ಸಂಚಾರ ಹೊರೆಯನ್ನು ಕಡಿಮೆ ಮಾಡಲು ಸಜ್ಜಾಗಿದೆ.

Must Read

error: Content is protected !!