ಹೊಸದಿಗಂತ ಡಿಜಿಟಲ್ ಡೆಸ್ಕ್: :
ದೆಹಲಿ ಭಾರತ್ ಮಂಟಪಂನಲ್ಲಿ ನಾಲ್ಕನೇ ಆವೃತ್ತಿಯ ಎಐ ಇಂಪ್ಯಾಟ್ ಶೃಂಗಸಭೆಗೆ ಪ್ರಧಾನಿ ನರೇಂದ್ರ ಮೋದಿ ಇಂದು ಚಾಲನೆ ನೀಡಿದ್ದಾರೆ.
ಇವತ್ತಿನಿಂದ ಫೆಬ್ರುವರಿ 20ರವರೆಗೂ ಐದು ದಿನಗಳ ಈ ಸಮಿಟ್ನ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ‘ಸರ್ವಜನ ಹಿತಾಯ, ಸರ್ವಜನ ಸುಖಾಯ’ ಥೀಮ್ನಲ್ಲಿ ಈ ಶೃಂಗಸಭೆ ಆಯೋಜನೆಯಾಗುತ್ತಿದೆ.
ಮೇಲಿದೆ. ಇಂದಿನಿಂದ ಇಲ್ಲಿ ಆರಂಭವಾಗಿರುವ ಕೃತಕ ಬುದ್ಧಿಮತ್ತೆ (ಎಐ) ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ವಿಶ್ವದ ತಂತ್ರಜ್ಞಾನ ಪರಿಣಿತರು, ಉದ್ಯಮಿಗಳು, ಗಣ್ಯ ನಾಯಕರು ಭಾಗವಹಿಸುತ್ತಿದ್ದಾರೆ.
ನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್, ಲೂಯಿಜ್ ಇನಾಸಿಯೊ ಲುಲಾ ಡ ಸಿಲ್ವಾ, ಪೆಡ್ರೊ ಸ್ಯಾಂಚೆಜ್ ಮತ್ತು ಡಿಕ್ ಸ್ಕೂಫ್‌ರಂತಹ ಉನ್ನತ ವ್ಯಕ್ತಿಗಳು ಸೇರಿದಂತೆ ಸುಮಾರು 20 ದೇಶಗಳ ನಾಯಕರು ಭಾಗವಹಿಸುವ ನಿರೀಕ್ಷೆಯಿದೆ. ಶೇಖ್ ಖಲೀದ್ ಬಿನ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್, ನವೀನ್‌ಚಂದ್ರ ರಾಮ್‌ಗೂಲಮ್, ಅನುರಾ ಕುಮಾರ ದಿಸಾನಾಯಕ ಮತ್ತು ತ್ಸೆರಿಂಗ್ ಟೋಬ್ಗೇ ಸೇರಿದಂತೆ ಇತರ ಪ್ರಮುಖರು ಭಾಗವಹಿಸಲಿದ್ದಾರೆ.

ಮಾನವ ಸಂಪನ್ಮೂಲ, ಒಳಗೊಳ್ಳುವಿಕೆ, ನಂಬಿಕೆ, ಪುಟಿದೇಳುವಿಕೆ, ವಿಜ್ಞಾನ, ಸಂಪನ್ಮೂಲ, ಸಾಮಾಜಿಕ ಒಳಿತು, ಈ ಅಂಶಗಳ ಆಧಾರದ ಮೇಲೆ ಜಾಗತಿಕ ಸಹಭಾಗಿತ್ವಗಳನ್ನು ಸೇರಿಸುವುದಕ್ಕೆ ಗಮನ ಕೊಡಲಾಗುತ್ತದೆ.
ಎಐ ಕ್ಷೇತ್ರದಲ್ಲಿ ಆಗಿರುವ ಹೊಸ ಹೊಸ ಆವಿಷ್ಕಾರಗಳ ಪ್ರದರ್ಶನಗಳನ್ನು ಕಾಣಬಹುದು. ವಿವಿಧ ಸ್ಟಾರ್ಟಪ್ಗಳು ತಮ್ಮ ಉತ್ಪನ್ನಗಳನ್ನು ತೋರ್ಪಡಿಸುತ್ತಿವೆ. 300ಕ್ಕೂ ಹೆಚ್ಚು ಪ್ರದರ್ಶಕರು ಈ ಸಮಾವೇಶದಲ್ಲಿ ಕಾರ್ಯನಿರತರಾಗಿರುತ್ತಾರೆ.



