Sunday, September 21, 2025

ಇಂದು ಸಂಜೆ 5 ಗಂಟೆಗೆ GST ಸುಧಾರಣೆ ಕುರಿತು ರಾಷ್ಟ್ರವನ್ನುದ್ದೇಶಿಸಿ ಪ್ರಧಾನಿ ಮೋದಿ ಭಾಷಣ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು, ಸೆಪ್ಟೆಂಬರ್ 21ರಂದು ಸಂಜೆ 5 ಗಂಟೆಗೆ ದೇಶದ ಜನತೆಯನ್ನುದ್ದೇಶಿಸಿ ಭಾಷಣ ನೀಡಲಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಈ ಭಾಷಣದಲ್ಲಿ ಜಿಎಸ್ಟಿ ಸುಧಾರಣೆ ಮತ್ತು ಹೊಸ ಜಿಎಸ್‌ಟಿ 2.0 ದರಗಳು ನಾಳೆಯಿಂದ ಜಾರಿಗೆ ಬರಲಿದೆ ಎಂಬುದು ಪ್ರಮುಖ ವಿಷಯವಾಗಲಿದೆ. ಕೇಂದ್ರ ಸರ್ಕಾರದ ಉದ್ದೇಶವು ವಾಣಿಜ್ಯ ಹಾಗೂ ವ್ಯವಹಾರಗಳಲ್ಲಿ ಸರಳತೆ ತರುವ ಮೂಲಕ ಸಾಮಾನ್ಯ ಜನರಿಗೆ ಹಾಗೂ ಉದ್ಯಮಿಗಳಿಗೆ ಲಾಭ ಒದಗಿಸುವುದಾಗಿದೆ.

ಜಿಎಸ್ಟಿ ಸುಧಾರಣೆ, ಉದ್ಯಮ ವಾತಾವರಣದಲ್ಲಿ ಆಗುತ್ತಿರುವ ಬದಲಾವಣೆ ಹಾಗೂ ವಿದೇಶಿ ಉದ್ಯೋಗಿಗಳ ಮೇಲೆ ಅಮೆರಿಕದ H1-B ವೀಸಾ ಕ್ರಮಗಳ ನಡುವೆ ದೇಶದ ಆರ್ಥಿಕ ಹಾಗೂ ಉದ್ಯೋಗ ವಲಯದಲ್ಲಿ ನಡೆಯುತ್ತಿರುವ ಪರಸ್ಪರ ಸಂಬಂಧಗಳು ಈ ಭಾಷಣದಲ್ಲಿ ಮುಖ್ಯವಾಗಿ ಹಂಚಿಕೊಳ್ಳಲಿದ್ದಾರೆ.

ಇದನ್ನೂ ಓದಿ