Monday, October 20, 2025

ಹಳಿಯಾಳ ಕ್ರಾಸ್ ಬಳಿ ಸ್ಟೇರಿಂಗ್ ಲಾಕ್ ಆಗಿ ಮರಕ್ಕೆ ಡಿಕ್ಕಿ ಹೊಡೆದ ಖಾಸಗಿ ಬಸ್

ಹೊಸ ದಿಗಂತ ವರದಿ,ಯಲ್ಲಾಪುರ :

ತಾಲೂಕಿನ ಹಳಿಯಾಳ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಖಾಸಗಿ ಬಸ್ ಸ್ಟೇರಿಂಗ್ ಲಾಕ್ ಆಗಿ ರಸ್ತೆ ಪಕ್ಕದ ಮರಕ್ಕೆ ಡಿಕ್ಕಿ ಹೊಡೆದ ಘಟನೆ ನಡೆದಿದೆ.

ಮುಂಬೈಯಿಂದ ಗೋವಾಗೆ ಹೋಗುತ್ತಿದ್ದ ಎಸ್.ಆ‌ರ್.ಎಸ್ ಬಸ್ ನ ಸ್ಟೇರಿಂಗ್ ಲಾಕ್ ಆಗಿದ್ದು, ರಸ್ತೆ ಪಕ್ಕದ ಮರಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಚಾಲಕನ ಕಾಲು ಮುರಿದಿದೆ. ಬಸ್ ನಲ್ಲೇ ಸಿಕ್ಕಿಕೊಂಡಿದ್ದ ಚಾಲಕನನ್ನು ಸ್ಥಳೀಯರು, ಪೊಲೀಸರು ಹೊರಕ್ಕೆ ತಂದಿದ್ದಾರೆ.

ಬಸ್ ನಲ್ಲಿ 20 ಕ್ಕೂ ಹೆಚ್ಚು ಪ್ರಯಾಣಿಕರಿದ್ದು, ಚಾಲಕ ಸೇರಿ ನಾಲ್ವರಿಗೆ ಹೆಚ್ಚಿನ ಪ್ರಮಾಣದ ಗಾಯಗಳಾಗಿವೆ. ಯಲ್ಲಾಪುರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಗೆ ಕಳುಹಿಸಲಾಗಿದೆ.

ಉಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಬಸ್ ನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

error: Content is protected !!