Thursday, October 23, 2025

ಪ್ರಿಯಾಂಕ್ ಖರ್ಗೆ RSS ಬಗ್ಗೆ ಮಾತಾಡುವಷ್ಟು ಪರಿಪಕ್ವ ಆಗಿಲ್ಲ: ಯತ್ನಾಳ್ ವಾಗ್ದಾಳಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

RSS ಕುರಿತು ಕಾಂಗ್ರೆಸ್ ನಾಯಕರ ಹೇಳಿಕೆಗಳ ವಿಚಾರವಾಗಿ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಕೆಂಡಾಮಂಡಲರಾಗಿದ್ದಾರೆ. ಪ್ರಿಯಾಂಕ್ ಖರ್ಗೆ ವಿರುದ್ಧ ಕಿಡಿಕಾರಿದ ಯತ್ನಾಳ್ ಅವರು, “ಆರ್‌ಎಸ್‌ಎಸ್‌ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಅವರಿಂದ ಏನೂ ಮಾಡಲು ಆಗಲಿಲ್ಲ, ಇನ್ನು ಪ್ರಿಯಾಂಕ್ ಖರ್ಗೆ ಅವರಿಂದ ಏನು ಆಗಲು ಸಾಧ್ಯ?” ಎಂದು ಪ್ರಶ್ನಿಸಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವನ್ನು “ಉರಿಯುತ್ತಿರುವ ಬೆಂಕಿಯ ಮನೆ”ಗೆ ಹೋಲಿಸಿದರು. “ಅಲ್ಲಿ ದಲಿತರಿಗೆ ಸ್ಥಾನ ಇಲ್ಲ ಎಂದಾದರೆ, ಅಂಬೇಡ್ಕರ್ ಅನುಯಾಯಿಗಳು ಕಾಂಗ್ರೆಸ್‌ನಲ್ಲಿ ಇರಬಾರದು. ಅಂಬೇಡ್ಕರ್ ವಿಚಾರಗಳಿಂದ ಖರ್ಗೆ ಕುಟುಂಬ ದೂರವಿದ್ದು, ತಾಲಿಬಾನಿಯರನ್ನು ಬೆಂಬಲಿಸುತ್ತದೆ,” ಎಂದು ಆರೋಪಿಸಿದರು.

ಪ್ರಿಯಾಂಕ್ ಖರ್ಗೆಗೆ ಟಾಂಗ್:
“ಪ್ರಿಯಾಂಕ್ ಖರ್ಗೆ ಗಾಂಧಿ ಕುಟುಂಬದ ಚೇಲಾ. ಅವರ ತಂದೆ, ಇಂದಿರಾ ಗಾಂಧಿ, ನೆಹರೂ ಅವರಿಗೂ ಸಂಘದ (RSS) ಬಗ್ಗೆ ಏನೂ ಮಾಡಲು ಸಾಧ್ಯವಾಗಿಲ್ಲ. ಇನ್ನೂ ಪ್ರಿಯಾಂಕ್ ಖರ್ಗೆ ಏನು ಕಿಸಿಯಲು ಆಗುತ್ತೆ? ಬಿಜೆಪಿ ಬಗ್ಗೆ, ಆರ್‌ಎಸ್‌ಎಸ್‌ ಬಗ್ಗೆ ಮಾತಾಡುವಷ್ಟು ಅವರು ಪರಿಪಕ್ವ ಆಗಿಲ್ಲ,” ಎಂದು ಯತ್ನಾಳ್ ಹರಿಹಾಯ್ದರು.

“ಯಾವ ಶಾಖೆ ಬಂದ್ ಮಾಡ್ತಾರೋ ನೋಡೋಣ. ಮುಂದೆ ನಮ್ಮ ಸರ್ಕಾರ ಬಂದಾಗ ಬಡ್ಡಿ ಸಮೇತ ನೋಡಿಕೊಳ್ತೇವೆ,” ಎಂದು ಎಚ್ಚರಿಸಿದ ಯತ್ನಾಳ್, “ಅಕ್ರಮ ಮಸೀದಿಗಳನ್ನು ಮೊದಲು ತೆಗೆದು ಹಾಕಿ, ನಂತರ ಆರ್‌ಎಸ್‌ಎಸ್ ಬಗ್ಗೆ ಮಾತಾಡಲಿ. ಇನ್ನೆರಡು ವರ್ಷ ಹಾರಾಡಿಕೊಳ್ಳಲಿ, ಮುಂದೆ ನಮ್ಮದೇ ಸರ್ಕಾರ ಅಧಿಕಾರಕ್ಕೆ ಬರುತ್ತದೆ,” ಎಂದು ಆಕ್ರೋಶ ಹೊರಹಾಕಿದರು.

error: Content is protected !!