March 20, 2026
Friday, March 20, 2026
spot_img

ಬಂದ ಎಲ್‌ಪಿಜಿ ಸಮರ್ಪಕ ಹಂಚಿಕೆ ಮಾಡಿ: ಕೇಂದ್ರ ಸಚಿವರಿಗೆ ಸಿಎಂ ಸಿದ್ದು ಮತ್ತೊಂದು ಪತ್ರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರಾಚ್ಯದಲ್ಲಿನ ಸಂಘರ್ಷದಿಂದ ರಾಜ್ಯದಲ್ಲಿಯೂ ಗ್ಯಾಸ್ ಸಿಲಿಂಡರ್ ಅಭಾವ ತೀವ್ರಗೊಳ್ಳುತ್ತಿದ್ದು, ತಕ್ಷಣವೇ ಸಿಲಿಂಡರ್‌ಗಳ ಪೂರೈಕೆ ಹೆಚ್ಚಿಸುವಂತೆ ಕೇಂದ್ರ ಸರ್ಕಾರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೆ ಪತ್ರ ಬರೆದಿದ್ದಾರೆ.

ಗ್ಯಾಸ್ ಸಿಲಿಂಡರ್ ಅಭಾವದಿಂದ ಹೊಟೇಲ್ ಸಹಿತ ವಿವಿಧ ಉದ್ಯಮಗಳು ಸಂಕಷ್ಟಕ್ಕೆ ಒಳಪಟ್ಟಿದೆ. ಹೊಟೇಲ್ ಉದ್ಯಮಕ್ಕೆ ಕೂಡಾ ದೊಡ್ಡ ಹೊಡೆತ ಬಿದ್ದಿದೆ. ದಿನಕ್ಕೆ 50 ಸಾವಿರ ಸಿಲಿಂಡರ್‌ಗಳ ಅಗತ್ಯವಿದೆ. ಆದರೆ ಅಭಾವದ ಪರಿಣಾಮ ಕೇವಲ 1 ಸಾವಿರ ಸಿಲಿಂಡರ್ ಮಾತ್ರ ಪೂರೈಸಲು ಸಾಧ್ಯವಾಗುತ್ತಿದೆ. ಹೀಗಾಗಿ ಈಗಾಗಲೇ ಭಾರತಕ್ಕೆ ಬಂದಿರುವ ಎರಡು ಎಲ್‌ಪಿಜಿ ಹಡಗುಗಳಲ್ಲಿನ ಎಲ್‌ಪಿಜಿಯನ್ನು ಸಮರ್ಪಕವಾಗಿ ಹಂಚಿಕೆ ಮಾಡಬೇಕು ಎಂದು ಅವರು ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಅವರಿಗೆ ಬರೆದ ಪತ್ರದಲ್ಲಿ ಆಗ್ರಹಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !