March 4, 2026
Wednesday, March 4, 2026
spot_img

ಬಿ ರಿಪೋರ್ಟ್‌ ಸಲ್ಲಿಕೆಗೆ 70 ಸಾವಿರ ರೂ. ಲಂಚ ಕೇಳಿದ್ದ ಪಿಎಸ್‌ಐ& ಎಎಸ್‌ಐ ಲೋಕಾ ಬಲೆಗೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಪ್ರಕರಣವೊಂದರ ಬಿ ರಿಪೋರ್ಟ್‌ ಸಲ್ಲಿಕೆಗೆ 70 ಸಾವಿರ ಲಂಚ ಪಡೆದ ಕೇಸ್‌ನಲ್ಲಿ ಎಎಸ್‌ಐ ಹಾಗೂ ಪಿಎಸ್‌ಐ ಇಬ್ಬರನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಚಿಕ್ಕಬಳ್ಳಾಪುರದ ಗ್ರಾಮಾಂತರ ಠಾಣೆಯ ಪಿಎಎಸ್‌ಐ ಶರಣಪ್ಪ ಹಾಗೂ ಎಎಸ್‌ಐ ವೆಂಕಟೇಶ್‌ರನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಲಾಗಿದೆ.

ರಘು ಎನ್ನುವವರ ಬಳಿ ಪ್ರಕರಣಕ್ಕೆ ಬಿ ರಿಪೋರ್ಟ್‌ ಸಲ್ಲಿಕೆಗೆ ಒಂದು ಲಕ್ಷ ರೂಪಾಯಿ ಲಂಚಕ್ಕೆ ಡಿಮ್ಯಾಂಡ್‌ ಮಾಡಿದ್ದರು. ಈ ಸಂಬಂಧ 70 ಸಾವಿರ ರೂಪಾಯಿ ಲಂಚ ಪಡೆಯುವಾಗ ಚಿಕ್ಕಬಳ್ಳಾಪುರ ನಗರದ ಕನ್ನಡ ಭವನದ ಬಳಿ ಎಎಸ್‌ಐ ವೆಂಕಟೇಶ್ ರನ್ನ ರೆಡ್ ಅಂಡ್ ಆಗಿ ಹಿಡಿಯಲಾಗಿದೆ. ಇನ್ನು ಪಿಎಸ್ಐ ಶರಣಪ್ಪ ಸೂಚನೆ ಮೇರೆಗೆ ಎಎಸ್‌ಐ ವೆಂಕಟೇಶ್ ಸೂಚನೆ ಮೇರೆಗೆ ಹಣ ಪಡೆದಿದ್ದಾರೆ ಎನ್ನಲಾಗಿದ್ದು ಪಿಎಸ್ಐ ಶರಣಪ್ಪನನ್ನ ಸಹ ವಶಕ್ಕೆ ಪಡೆಯಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !