January20, 2026
Tuesday, January 20, 2026
spot_img

ಪಿಯುಸಿ ಮಕ್ಕಳೇ ಇಲ್ಲಿ ಕೇಳಿ: ಸ್ಟಡಿ ಹಾಲಿಡೇ ಕ್ಯಾನ್ಸಲ್, ಕಾಲೇಜು ಹಾಜರಿ ಕಡ್ಡಾಯ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಈವರೆಗೆ ದೊರೆಯುತ್ತಿದ್ದ ಸ್ಟಡಿ ಹಾಲಿಡೇ ವ್ಯವಸ್ಥೆಯನ್ನು ಶಿಕ್ಷಣ ಇಲಾಖೆ ರದ್ದುಪಡಿಸಿದೆ. ಫಲಿತಾಂಶ ಸುಧಾರಣೆಯ ಉದ್ದೇಶದಿಂದ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

ಪೂರ್ವಸಿದ್ಧತಾ ಪರೀಕ್ಷೆಗಳ ಬಳಿಕ ನೀಡುತ್ತಿದ್ದ ಒಂದು ತಿಂಗಳ ರಜೆಯಿಂದ ಯಾವುದೇ ಲಾಭವಾಗುತ್ತಿಲ್ಲ ಎಂಬ ಕಾರಣಕ್ಕೆ, ಫೆಬ್ರವರಿ 26ರವರೆಗೆ ಕಾಲೇಜುಗಳನ್ನು ನಡೆಸಲು ಇಲಾಖೆ ಸೂಚಿಸಿದೆ. ಇನ್ನು ಮುಂದೆ ಪರೀಕ್ಷೆ ಮುಗಿಯುವವರೆಗೂ ವಿದ್ಯಾರ್ಥಿಗಳು ಕಡ್ಡಾಯವಾಗಿ ಕಾಲೇಜಿಗೆ ಹಾಜರಾಗಬೇಕು.

ಉಪನ್ಯಾಸಕರ ಮಾರ್ಗದರ್ಶನದಲ್ಲಿ ಪಠ್ಯ ಪುನರವಲೋಕನ, ಅನುಮಾನ ನಿವಾರಣೆ ಮತ್ತು ಗುಂಪು ಅಧ್ಯಯನ ನಡೆಯಲಿದ್ದು, ಶಿಕ್ಷಕರಿಗೂ ಕಡ್ಡಾಯ ಹಾಜರಾತಿ ವಿಧಿಸಲಾಗಿದೆ.

Must Read