April 11, 2026
Saturday, April 11, 2026
spot_img

ಪಲ್ಯ, ಗ್ರೇವಿ & More 58 | ಹಸಿ ಪಪ್ಪಾಯಿ ಪಲ್ಯ: ರುಚಿ ಜೊತೆಗೆ ಆರೋಗ್ಯಕ್ಕೂ ಬೆಸ್ಟ್ ರೆಸಿಪಿ

ಹಸಿ ಪಪ್ಪಾಯಿ ಪಲ್ಯ ತಿಂದಿದ್ದೀರಾ? ಹಸಿ ಪಪ್ಪಾಯಿಯಲ್ಲಿ ಫೈಬರ್, ವಿಟಮಿನ್ A ಮತ್ತು ಜೀರ್ಣಕ್ರಿಯೆಗೆ ಸಹಾಯಕವಾಗುವ ಪೋಷಕಾಂಶಗಳು ಸಮೃದ್ಧವಾಗಿವೆ. ಅನ್ನ, ಸಾಂಬಾರ್ ಅಥವಾ ಚಪಾತಿಯ ಜೊತೆಗೆ ಈ ಪಲ್ಯ ತುಂಬಾ ಚೆನ್ನಾಗಿ ಹೊಂದುತ್ತದೆ. ರುಚಿನೂ ಚೆನ್ನಾಗಿರುತ್ತೆ.

ಬೇಕಾಗುವ ಪದಾರ್ಥಗಳು:

ಹಸಿ ಪಪ್ಪಾಯಿ – 1 ಕಪ್
ಎಣ್ಣೆ – 2 ಟೀ ಸ್ಪೂನ್
ಸಾಸಿವೆ – 1/2 ಟೀ ಸ್ಪೂನ್
ಉದ್ದಿನ ಬೇಳೆ – 1 ಟೀ ಸ್ಪೂನ್
ಕಡಲೆ ಬೇಳೆ – 1 ಟೀ ಸ್ಪೂನ್
ಹಸಿಮೆಣಸಿನಕಾಯಿ – 2 (ಚೂರು ಮಾಡಿದದ್ದು)
ಕರಿಬೇವು – ಕೆಲವು ಎಲೆಗಳು
ಅರಿಶಿನ – 1/4 ಟೀ ಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ತೆಂಗಿನ ತುರಿ – 2 ಟೇಬಲ್ ಸ್ಪೂನ್
ಕೊತ್ತಂಬರಿ ಸೊಪ್ಪು – ಸ್ವಲ್ಪ

ಮಾಡುವ ವಿಧಾನ:

ಮೊದಲು ಹಸಿ ಪಪ್ಪಾಯಿಯ ಸಿಪ್ಪೆ ತೆಗೆದು ಬೀಜಗಳನ್ನು ತೆಗೆದು ತುರಿದುಕೊಳ್ಳಿ. ಈಗ ಬಾಣಲೆಯಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿ. ಅದಕ್ಕೆ ಸಾಸಿವೆ ಹಾಕಿ ಚಿಟಪಟನೆ ಸಿಡಿದ ಬಳಿಕ ಉದ್ದಿನ ಬೇಳೆ, ಕಡಲೆ ಬೇಳೆ, ಹಸಿಮೆಣಸಿನಕಾಯಿ ಮತ್ತು ಕರಿಬೇವು ಹಾಕಿ ಹುರಿಯಿರಿ.

ನಂತರ ತುರಿದ ಪಪ್ಪಾಯಿ, ಅರಿಶಿನ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಕಲಸಿ. ಸ್ವಲ್ಪ ನೀರು ಹಾಕಿ ಮುಚ್ಚಿ 5–7 ನಿಮಿಷ ಮೃದುವಾಗುವವರೆಗೆ ಬೇಯಿಸಿ.

ಕೊನೆಯಲ್ಲಿ ತೆಂಗಿನ ತುರಿ ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ ಕಲಸಿ ಗ್ಯಾಸ್ ಆಫ್ ಮಾಡಿ.

ಬಿಸಿ ಅನ್ನ ಅಥವಾ ಚಪಾತಿಯ ಜೊತೆ ಸವಿಯಲು ರೆಡಿ!

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !