ಹೊಸದಿಗಂತ ಬೆಂಗಳೂರು
ಭಾರತದ ಅತಿದೊಡ್ಡ ಉದ್ಯಮ ಸಂಸ್ಥೆ ರಿಲಯನ್ಸ್ ಇಂಡಸ್ಟ್ರೀಸ್‌ನ ಎಫ್‌ಎಂಸಿಜಿ ವಿಭಾಗವಾದ ಆರ್‌ಸಿಪಿಎಲ್ (RCPL), ತನ್ನ ಪ್ಯಾಕೇಜ್ಡ್ ಕುಡಿಯುವ ನೀರಿನ ಬ್ರ್ಯಾಂಡ್ ‘ಕ್ಯಾಂಪಾ ಶ್ಯೂರ್’ಗೆ ಬಾಲಿವುಡ್‌ನ ದಂತಕಥೆ ಅಮಿತಾಭ್ ಬಚ್ಚನ್ ಅವರನ್ನು ಬ್ರ್ಯಾಂಡ್ ಅಂಬಾಸಿಡರ್ ಆಗಿ ಘೋಷಿಸಿದೆ.
ದಶಕಗಳಿಂದ ಭಾರತೀಯರ ಮನಗೆದ್ದಿರುವ ಅಮಿತಾಭ್ ಬಚ್ಚನ್ ಅವರು ನಂಬಿಕೆ ಮತ್ತು ಶ್ರೇಷ್ಠತೆಯ ಸಂಕೇತ. ಅದೇ ರೀತಿ, ಐಕಾನಿಕ್ ಬ್ರ್ಯಾಂಡ್ ಆದ ‘ಕ್ಯಾಂಪಾ’ ಕೂಡ ಭಾರತೀಯರ ಭಾವನೆಗಳೊಂದಿಗೆ ಬೆರೆತಿದೆ. ಈ ಎರಡು ಶಕ್ತಿಗಳು ಒಂದಾಗಿರುವುದು ಗ್ರಾಹಕರಲ್ಲಿ ಹೊಸ ಭರವಸೆ ಮೂಡಿಸಿದೆ.
ಈ ಕುರಿತು ಮಾತನಾಡಿದ ಆರ್‌ಸಿಪಿಎಲ್ ಕಾರ್ಯನಿರ್ವಾಹಕ ನಿರ್ದೇಶಕ ಕೇತನ್ ಮೋದಿ, “ಅಮಿತಾಭ್ ಬಚ್ಚನ್ ಅವರ ವ್ಯಕ್ತಿತ್ವ ಮತ್ತು ಕ್ಯಾಂಪಾ ಬ್ರ್ಯಾಂಡ್‌ನ ಮೌಲ್ಯಗಳು ಒಂದೇ ಆಗಿವೆ. ಪ್ರತಿಯೊಬ್ಬ ಭಾರತೀಯನಿಗೂ ಅತ್ಯಂತ ಕೈಗೆಟುಕುವ ದರದಲ್ಲಿ ಶುದ್ಧ ಕುಡಿಯುವ ನೀರನ್ನು ಒದಗಿಸುವುದೇ ನಮ್ಮ ಗುರಿ,” ಎಂದು ತಿಳಿಸಿದರು.
ತಮ್ಮ ಹೊಸ ಜವಾಬ್ದಾರಿಯ ಬಗ್ಗೆ ಪ್ರತಿಕ್ರಿಯಿಸಿದ ಅಮಿತಾಭ್ ಬಚ್ಚನ್, “ಪ್ರತಿಯೊಬ್ಬರಿಗೂ ಶುದ್ಧ ನೀರು ಸಿಗಬೇಕೆಂಬ ಕ್ಯಾಂಪಾ ಶ್ಯೂರ್‌ನ ಈ ಅಭಿಯಾನದಲ್ಲಿ ಭಾಗಿಯಾಗಲು ನನಗೆ ಹೆಮ್ಮೆಯಾಗುತ್ತಿದೆ,” ಎಂದಿದ್ದಾರೆ.
ಕ್ಯಾಂಪಾ ಶ್ಯೂರ್ ವಿಶೇಷತೆಗಳು:
10 ಹಂತಗಳ ಶುದ್ಧೀಕರಣ: ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ನೀರನ್ನು ಶುದ್ಧೀಕರಿಸಲಾಗುತ್ತದೆ.
ಎಲ್ಲಾ ಅಳತೆಗಳಲ್ಲಿ ಲಭ್ಯ: ಗ್ರಾಹಕರ ಅನುಕೂಲಕ್ಕೆ ತಕ್ಕಂತೆ 250ml ನಿಂದ ಹಿಡಿದು 20 ಲೀಟರ್‌ವರೆಗಿನ ವಿವಿಧ ಪ್ಯಾಕ್‌ಗಳಲ್ಲಿ ಲಭ್ಯವಿದೆ.
ಐಕಾನಿಕ್ ಪರಂಪರೆ: 2022 ರಲ್ಲಿ ರಿಲಯನ್ಸ್ ತೆಕ್ಕೆಗೆ ಸೇರಿದ ಕ್ಯಾಂಪಾ, ಇಂದು ತಂಪು ಪಾನೀಯ ಮತ್ತು ನೀರಿನ ಮಾರುಕಟ್ಟೆಯಲ್ಲಿ ದೊಡ್ಡ ಶಕ್ತಿಯಾಗಿ ಬೆಳೆದಿದೆ.

