Wednesday, October 22, 2025

ರಘು ದೀಕ್ಷಿತ್‌ಗೆ ಕೂಡಿಬಂತು ಕಂಕಣಭಾಗ್ಯ: ವಧು ಕೂಡ ಫೇಮಸ್‌ ಸಿಂಗರ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕನ್ನಡದ ಖ್ಯಾತ ಗಾಯಕಿ, ಗ್ರ್ಯಾಮಿ-ನಾಮನಿರ್ದೇಶಿತ ಗಾಯಕಿ ವಾರಿಜಶ್ರೀ ವೇಣುಗೋಪಾಲ್ ಜೊತೆ ಗಾಯಕ, ಸಂಗೀತ ನಿರ್ದೇಶಕ ರಘು ದೀಕ್ಷಿತ್ ಸಪ್ತಪದಿ ತುಳಿಯಲಿದ್ದಾರೆ.

ಇದೇ ಅಕ್ಟೋಬರ್ ತಿಂಗಳಲ್ಲಿ ಇಬ್ಬರ ವಿವಾಹ ಸಮಾರಂಭ ನೆರವೇರಲಿದೆ. ಇಬ್ಬರೂ ತುಂಬಾ ವರ್ಷಗಳ ಗೆಳೆಯರಾಗಿದ್ದು, ಹಲವು ವೇದಿಕೆಗಳಲ್ಲಿ ಒಟ್ಟಿಗೆ ಕಾರ್ಯಕ್ರಮ ನೀಡಿದ್ದಾರೆ. ಟಗರು, ಡಾರ್ಲಿಂಗ್, ಆಚಾರ್ ಅಂಡ್ ಕೋ ಸೇರಿದಂತೆ ಹಲವು ಸಿನಿಮಾಗಳಿಗೆ ಹಾಡು ಹಾಡಿದ್ದಾರೆ.



ಹೊಸ ಆರಂಭವು ಆಳವಾದ ನೆಲೆಯನ್ನು ನೀಡುತ್ತದೆ. ಸತ್ಯ ಹೇಳಬೇಕು ಅಂದರೆ ಇದು ಬರುವುದನ್ನು ನಾನು ನಿರೀಕ್ಷೆ ಮಾಡಿರಲಿಲ್ಲ. ನನ್ನ ಜೀವನದುದ್ದಕ್ಕೂ ಒಂಟಿಯಾಗಿರಲು ನನ್ನನ್ನು ನಾನು ಸಿದ್ಧಪಡಿಸಿಕೊಂಡಿದ್ದೆ. ಆದರೆ ಜೀವನ ಬೇರೆಯದ್ದೇ ಪ್ಲಾನ್ ಹೊಂದಿತ್ತು. ನಮ್ಮಿಬ್ಬರ ಬಲವಾದ ಸ್ನೇಹ ಸ್ವಾಭಾವಿಕವಾಗಿ ಪ್ರೀತಿ, ಒಟನಾಟವಾಗಿ ವಿಕಸನಗೊಂಡಿತು. ನಾವು ಒಂದೇ ರೀತಿಯ ಆಸಕ್ತಿಗಳನ್ನು ಹಂಚಿಕೊಳ್ಳುತ್ತೇವೆ. ವಾರಿಜಶ್ರೀ ಪೋಷಕರ ಆಶೀರ್ವಾದದೊಂದಿಗೆ ಜೀವನದ ಈ ಹೊಸ ಅಧ್ಯಾಯ ಒಟ್ಟಿಗೆ ಆರಂಭಿಸಲು ಉತ್ಸುಕರಾಗಿದ್ದೇವೆ ಎಂದು ರಘು ದೀಕ್ಷಿತ್ ಹೇಳಿದ್ದಾರೆ ಅಂತಾ ಮಾಧ್ಯವೊಂದು ವರದಿ ಮಾಡಿದೆ. 

error: Content is protected !!