ತೂಕ ಇಳಿಸೋದಕ್ಕೆ ಯಾವ ಧಾನ್ಯ ಹೆಚ್ಚು ಉಪಕಾರಿಯೆಂಬ ಗೊಂದಲ ಬಹುತೇಕರಲ್ಲಿ ಇದೆ. ವಿಶೇಷವಾಗಿ ರಾಗಿ ಮತ್ತು ಗೋಧಿ ಇವೆರಡೂ ನಮ್ಮ ಊಟದ ಪ್ಲೇಟಿನ ಮುಖ್ಯ ಅಂಗ. ಆದರೆ ತೂಕ ಇಳಿಸಬೇಕೆಂದರೆ ಯಾವುದು ಹೆಚ್ಚು ಪೋಷಕ, ಕಡಿಮೆ ಕ್ಯಾಲೊರಿ, ಮತ್ತು ಹೊಟ್ಟೆ ತುಂಬುವ ಆಹಾರ? ದೇಹದ ಮೆಟಾಬೊಲಿಸಂ ಮತ್ತು ಹಸಿವಿನ ನಿಯಂತ್ರಣಕ್ಕೆ ಯಾವ ಧಾನ್ಯ ಉತ್ತಮವಾಗಿ ಕೆಲಸ ಮಾಡುತ್ತದೆ? ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.
ಫೈಬರ್ ಪ್ರಮಾಣ:
ರಾಗಿ ಗೋಧಿಗಿಂತ ಹಲವು ಪಟ್ಟು ಹೆಚ್ಚು ಫೈಬರ್ ಹೊಂದಿದೆ. ಇದು ಹೊಟ್ಟೆ ತುಂಬಿದ ಭಾವನೆಯನ್ನು ಹೆಚ್ಚು ಸಮಯ ಇಟ್ಟುಕೊಳ್ಳುತ್ತದೆ ಮತ್ತು ಅತಿಹಸಿವು ನಿಯಂತ್ರಿಸುತ್ತದೆ. ತೂಕ ಇಳಿಕೆಗೆ ಇದು ದೊಡ್ಡ ಪ್ಲಸ್.
ಕ್ಯಾಲೊರಿ ಮತ್ತು ಕಾರ್ಬೋಹೈಡ್ರೇಟ್
ಗೋಧಿಯಲ್ಲಿ ಕಾರ್ಬೋಹೈಡ್ರೇಟ್ ಗರಿಷ್ಟ ಇದೆ. ಜೊತೆಗೆ ಕ್ಯಾಲೊರಿ ಕೂಡ ಸ್ವಲ್ಪ ಜಾಸ್ತಿ. ರಾಗಿ ನಿಧಾನವಾಗಿ ಹೀರುವ ಕಾರ್ಬೋಹೈಡ್ರೇಟ್ ಹೊಂದಿರುವುದರಿಂದ ಶಕ್ತಿ ಸ್ಥಿರವಾಗಿ ಕೊಡುವುದು, ಕೊಬ್ಬು ಜಮೆಯಾಗುವಿಕೆ ಕಡಿಮೆ.
ಪ್ರೋಟೀನ್ ಮತ್ತು ಪೋಷಕಾಂಶಗಳು:
ಗೋಧಿಯಲ್ಲಿ ಪ್ರೋಟೀನ್ ಸ್ವಲ್ಪ ಹೆಚ್ಚು ಇದ್ದರೂ, ರಾಗಿ ಕ್ಯಾಲ್ಸಿಯಂ, ಐರನ್ ಮತ್ತು ಆಂಟಿ-ಆಕ್ಸಿಡೆಂಟ್‌ಗಳಲ್ಲಿ ಶ್ರೀಮಂತ. ತೂಕ ಇಳಿಕೆ ಸಮಯದಲ್ಲಿ ದೇಹಕ್ಕೆ ಅಗತ್ಯ ಪೋಷಕಾಂಶಗಳನ್ನು ರಾಗಿ ಉತ್ತಮವಾಗಿ ಪೂರೈಸುತ್ತದೆ.
ಶುಗರ್ ಲೆವೆಲ್ ನಿಯಂತ್ರಣ:
ರಾಗಿ ಗ್ಲೈಸೆಮಿಕ್ ಇಂಡೆಕ್ಸ್ ಕಡಿಮೆ. ಇದರಿಂದ ರಕ್ತದಲ್ಲಿನ ಶುಗರ್ ಏರಿಳಿತವನ್ನು ತಡೆದು ತೂಕ ಇಳಿಕೆಗೆ ಸಹಕಾರಿಯಾಗುತ್ತದೆ.
ತೂಕ ಇಳಿಸೋಕೆ ರಾಗಿಯೇ ಬೆಸ್ಟ್!
ಫೈಬರ್ ಹೆಚ್ಚು, ಶುಗರ್ ನಿಯಂತ್ರಣ, ಕಡಿಮೆ ಕ್ಯಾಲೊರಿ ಮತ್ತು ಹೊಟ್ಟೆ ತುಂಬುವ ಗುಣ ಈ ಎಲ್ಲವೂ ರಾಗಿ ತೂಕ ಇಳಿಕೆಗೆ ಗೋಧಿಗಿಂತ ಹೆಚ್ಚು ಪರಿಣಾಮಕಾರಿ ಆಯ್ಕೆ ಅಂತ ತೋರಿಸುತ್ತೆ.

